ವಕ್ಫ್ ಬೋರ್ಡ್ ಭೂಮಿ ಅತಿಕ್ರಮಣ ಸಂತ್ರಸ್ತರಿಗೆ 24×7 ಸಹಾಯವಾಣಿ ನೆರವು – ಪ್ರಮೋದ್ ಮುತಾಲಿಕ್

ಮಂಗಳೂರು : ವಕ್ಫ್ ಬೋರ್ಡ್ ಭೂಮಿ ಅತಿಕ್ರಮಣ ಸಂತ್ರಸ್ತರಿಗೆ ನೆರವು ನೀಡಲು ಶ್ರೀರಾಮಸೇನೆ ಕರ್ನಾಟಕ 24×7 ಕಾರ್ಯಾಚರಿಸುವ ಸಹಾಯವಾಣಿಯನ್ನು ಆರಂಭಿಸಿದೆ. 9945288819 ಮೊಬೈಲ್ ಸಂಖ್ಯೆಯಿರುವ ಸಹಾಯವಾಣಿಯನ್ನು ಮಂಗಳೂರಿನ ಆರ್ಯ ಸಮಾಜದಲ್ಲಿ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹಾಗೂ ಅನ್ವರ್ ಮಾಣಿಪಾಡಿ ಬಿಡುಗಡೆ ಮಾಡಿದರು.

ಬಳಿಕ ಪ್ರಮೋದ್ ಮುತಾಲಿಕ್ ಮಾತನಾಡಿ, ವಕ್ಫ್ ಬೋರ್ಡ್‌ ಕಾಯ್ದೆಗೆ ಪ್ರಧಾನಿ ಮೋದಿಯವರು 44ತಿದ್ದುಪಡಿ ತರುತ್ತಿರುವುದು ಸ್ವಾಗತಾರ್ಹ‌. ವಕ್ಫ್ ಬೋರ್ಡ್‌ ರೈತರ ಭೂಮಿ, ಮಠ, ಗರಡಿಮನೆ, ದೇವಾಲಯ, ಪುರಾತತ್ವ ಇಲಾಖೆ ಕಟ್ಟಡ ಬೆಳಗಾವಿ ಎಸ್ಪಿ ಆಫೀಸ್, ವಿಜಯಪುರ ಡಿಸಿ ಆಪೀಸ್, ಸರಕಾರಿ ಆಸ್ಪತ್ರೆ ಸೇರಿದಂತೆ 9ಸಾವಿರ 44ಲಕ್ಷ ಎಕರೆ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡಿದೆ‌. ಹಳ್ಳಿಹಳ್ಳಿಗಳನ್ನೇ ವಕ್ಫ್ ಬೋರ್ಡ್ ಪ್ರಾಪರ್ಟಿಯಾಗಿ ಸೇರಿಸಿಕೊಂಡಿರುವುದು ಕರ್ನಾಟಕದಲ್ಲಿ ನಡೆದಿದೆ‌. ಆದರೂ ಇನ್ನೂ ಸಮಾಜ ಎಚ್ಚೆತ್ತುಕೊಂಡಿಲ್ಲ. ದ.ಕ. ಮತ್ತು ಉಡುಪಿಯವರು ಇನ್ನೂ ಮಲಗಿಕೊಂಡಿದ್ದಾರೆ. ಆದ್ದರಿಂದ ನಿಮ್ಮ ಬುಡಕ್ಕೆ ಬರುವವರೆಗೆ ಎಚ್ಚೆತ್ತುಕೊಳ್ಳದಿದ್ದರೆ ಖಂಡಿತಾ ಮುಳುಗಿ ಹೋಗ್ತೀರಿ ಎಂದು ಅವರು ಎಚ್ಚರಿಕೆ ನೀಡಿದರು.

ಮಠಾಧಿಪತಿಗಳು, ಸಂಘಟನೆಗಳು ಈ ಬಗ್ಗೆ ಬಾಯಿಮುಚ್ಚಿಕೊಂಡು ಕುಳಿತಿದೆ. ಎಲ್ಲರೂ ಸ್ಪಂದಿಸಬೇಕು, ಪ್ರತಿಭಟಿಸಬೇಕು, ನಿಮ್ಮ ಹೋರಾಟ ನರೇಂದ್ರ ಮೋದಿಯವರನ್ನು ತಲುಪುವವರೆಗೆ ಇರಬೇಕು. ನರೇಂದ್ರ ಮೋದಿಯವರು ತರುತ್ತಿರುವ 44ತಿದ್ದುಪಡಿಗಳ ವಿರುದ್ಧ ಮುಸ್ಲಿಂ ಸಮುದಾಯ ಪ್ರತಿಭಟನೆ ನಡೆಸುವ ಕಾರ್ಯ ಕರ್ನಾಟಕದಲ್ಲಿ ಆರಂಭವಾಗ್ತಿದೆ. ಈ ದೃಷ್ಟಿಯಿಂದ ಶ್ರೀ ರಾಮಸೇನೆ ರೈತರಿಗೆ ಸಹಾಯವಾಣಿ ಹಾಗೂ ಕರ್ನಾಟಕದ ಮೂರೂ ಹೈಕೋರ್ಟ್‌ಗಳಿಗೆ ಪಿಐಎಲ್ ಹಾಕಲು ಐದೈದು ವಕೀಲರ ತಂಡಗಳನ್ನು ರಚಿಸಿದ್ದೇವೆ‌. ಇದರ ಮೂಲಕ ವಕ್ಫ್ ಬೋರ್ಡ್ ಭೂಮಿ ಅತಿಕ್ರಮಣ ಸಂತ್ರಸ್ತರಿಗೆ ನೆರವು ನೀಡಲು ನಿರ್ಧರಿಸಿದ್ದೇವೆ ಎಂದು ಪ್ರಮೋದ್ ಮುತಾಲಿಕ್ ಹೇಳಿದರು.

Related posts

ಮಂಗಳೂರು ವಿವಿಯಿಂದ ಯಕ್ಷ ಮಂಗಳ ಪ್ರಶಸ್ತಿ ಪ್ರದಾನ

National Fame Award of India Books of Award – Sushanth Brahmavar

ಯಕ್ಷಗಾನ ಹಾಸ್ಯಗಾರ ಮುಖ್ಯಪ್ರಾಣ ಕಿನ್ನಿಗೋಳಿ ನಿಧನಕ್ಕೆ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಸಂತಾಪ