“ನಾಗರಿಕ ಹೋರಾಟ ಸಮಿತಿ, ಸುರತ್ಕಲ್” ನಿಯೋಗದಿಂದ ಮಮ್ತಾಜ್ ಅಲಿ ನಿವಾಸಕ್ಕೆ ಭೇಟಿ. ಕುಟುಂಬಕ್ಕೆ ಸಾಂತ್ವನ, ಸಮಗ್ರ ತನಿಖೆಗೆ ಆಗ್ರಹ

ಮಂಗಳೂರು : ವಿವಿಧ ಸಂಘಟನೆಗಳ ಪ್ರತಿನಿಧಿಗಳನ್ನು ಒಳಗೊಂಡ “ನಾಗರಿಕ ಹೋರಾಟ ಸಮಿತಿ, ಸುರತ್ಕಲ್” ಇದರ ನಿಯೋಗ ಚೊಕ್ಕಬೆಟ್ಟು‌ನಲ್ಲಿರುವ ಮಮ್ತಾಜ್ ಅಲಿ ಅವರ ಕುಟುಂಬದ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿತು. ಮುಮ್ತಾಜ್ ಅಲಿಯವರನ್ನು ಬ್ಲಾಕ್ ಮೇಲ್ ಮಾಡಿದ ಪ್ರಕರಣದಲ್ಲಿ ಸಮಗ್ರ ತನಿಖೆಗಾಗಿ ಕುಟುಂಬ ನಡೆಸುವ ಪ್ರಯತ್ನದಲ್ಲಿ ಜೊತೆಗಿರುವುದಾಗಿ ಭರವಸೆ ನೀಡಿತು.

ನಿಯೋಗದ ಸದಸ್ಯರು ಪ್ರಕರಣದಲ್ಲಿ ಈವರಗಿನ ಬೆಳವಣಿಗೆಗಳ ಕುರಿತು ಮಮ್ತಾಜ್ ಅಲಿ ಹಿರಿಯ ಸಹೋದರ, ಮಾಜಿ ಶಾಸಕ ಮೊಯ್ದಿನ್ ಬಾವಾ ಅವರಿಂದ ಮಾಹಿತಿ ಪಡೆಯಿತು‌. ಈ ಪ್ರಕರಣದಲ್ಲಿ ಆಳವಾದ ತನಿಖೆಯ ಮೂಲಕ ಇದರಲ್ಲಿ ಭಾಗಿಗಳಾಗಿರುವ ಕಾಣದ ಕೈಗಳನ್ನು ಬಯಲಿಗೆಳೆಯಲು, ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆಯಾಗಲು ಎಲ್ಲಾ ಪ್ರಯತ್ನಗಳನ್ನು ನಡೆಸುವುದಾಗಿ ನಿಯೋಗ ಕುಟುಂಬಕ್ಕೆ ಭರವಸೆ ನೀಡಿತು. ಈ ಪ್ರಕರಣದ ಆರೋಪಿಗಳು ಇನ್ನಷ್ಟು ಇಂತಹದ್ದೇ ಬ್ಲಾಕ್ ಮೇಲ್ ಕೃತ್ಯಗಳಲ್ಲಿ ಭಾಗಿಗಳಾಗಿರುವ ಮಾತುಗಳು ನಾಗರಿಕ ವಲಯದಲ್ಲಿ ಕೇಳಿ ಬರುತ್ತಿದ್ದು, ಆ ನಿಟ್ಟಿನಲ್ಲಿಯೂ ತನಿಖೆ ನಡೆಸಲು, ಈ ಪ್ರಕರಣದ ತನಿಖೆಗೆ ನುರಿತ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳನ್ನು ಒದಗಿಸುವಂತೆ ಸರಕಾರವನ್ನು ಒತ್ತಾಯಿಸುವುದಾಗಿ ಮುಖಂಡರು ಹೇಳಿದರು.

ನಿಯೋಗದಲ್ಲಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ, ಸಾಮಾಜಿಕ ಚಿಂತಕರಾದ ಎಮ್ ಜಿ ಹೆಗ್ಡೆ, ಮಾಜಿ ಕಾರ್ಪೊರೇಟರ್‌ಗಳಾದ ಪ್ರತಿಭಾ ಕುಳಾಯಿ, ಅಯಾಝ್ ಕೃಷ್ಣಾಪುರ, ಹಿರಿಯ ಕಾರ್ಮಿಕ ನಾಯಕ ಸದಾಶಿವ ಶೆಟ್ಟಿ, ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ ಕೆ ಇಮ್ತಿಯಾಜ್, ವಿವಿಧ ಸಂಘಟನೆಗಳ ಪ್ರಮುಖರಾದ ಮೂಸಬ್ಬ ಪಕ್ಷಿಕೆರೆ, ಶ್ರೀನಾಥ್ ಕುಲಾಲ್, ಟಿ ಎನ್ ರಮೇಶ್, ರಾಜೇಶ್ ಪೂಜಾರಿ ಕುಳಾಯಿ, ಶ್ರೀಕಾಂತ್ ಸಾಲ್ಯಾನ್, ಆನಂದ ಅಮೀನ್, ಸಾಹುಲ್ ಹಮೀದ್ ಬಜ್ಪೆ, ನವಾಜ್ ಕಾಟಿಪಳ್ಳ, ಅನಿಲ್ ಮೆನೇಜಸ್ ವಾಮಂಜೂರು, ವಿಶು ಪೂಜಾರಿ ಪಚ್ಚನಾಡಿ, ಹಂಝ ಇಡ್ಯಾ, ಕುಳಾಯಿ ಬಿಲ್ಲವರ ಸಂಘದ ಮಾಜಿ ಅಧ್ಯಕ್ಷ ಪ್ರಭಾಕರ ಕುಳಾಯಿ ಮತ್ತಿತರರು ಇದ್ದರು.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !