ಭೂ ಕುಸಿತ ಪ್ರದೇಶಗಳಿಗೆ ಜಿಎಸ್‌ಐ ವಿಜ್ಞಾನಿಗಳ ಭೇಟಿ

ಉಡುಪಿ : ಜಿಲ್ಲೆಯಲ್ಲಿ ಸಂಭವಿಸಿದ್ದ ಭೂ ಕುಸಿತ ಪ್ರದೇಶಗಳಿಗೆ ಜಿಎಸ್‌ಐ (ಜಿಯಾಲಜಿಕಲ್‌ ಸರ್ವೇ ಆಫ್ ಇಂಡಿಯಾ) ಭೂ ವಿಜ್ಞಾನಿಗಳ ತಂಡ ಭೇಟಿ ನೀಡಿದೆ.

ಈ ತಂಡವು ಬೈಂದೂರು ತಾಲೂಕಿನ ಕೊಲ್ಲೂರು, ಶಿರೂರು, ಸೋಮೇಶ್ವರ, ಹಾಲಾಡಿ, ಹೆಬ್ರಿ ತಾಲೂಕಿನ ಕನ್ಯಾನ, ಕಾರ್ಕಳ ತಾಲೂಕಿನ ಮಾಳ ಪ್ರದೇಶಕ್ಕೆ ಭೇಟಿ ನೀಡಿದರು. ಹೆದ್ದಾರಿ ಅಭಿವೃದ್ಧಿಗಾಗಿ ಗುಡ್ಡವನ್ನು ಅಗೆದ ರೀತಿಯ ಬಗ್ಗೆ ಪರಿಶೀಲನೆ ನಡೆಸಿತು. ಮಾಳದಲ್ಲಿ ಮನೆಯ ಸಮೀಪ ಗುಡ್ಡ ಜರಿದಿರುವ ಬಗ್ಗೆ ಅಧ್ಯಯನ ನಡೆಸಿತು.

ಜಿಎಸ್‌ಐ ಬೆಂಗಳೂರು ಪ್ರಾದೇಶಿಕ ಕಚೇರಿ ಭೂ ವಿಜ್ಞಾನಿಗಳಾದ ಸೆಂಥಿಲ್‌ಕುಮಾರ್‌, ಸುವೇಶ್‌, ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿ ಸಂದೀಪ್‌ ಯು. ಮತ್ತು ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ ತಂಡದಲ್ಲಿದ್ದರು.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ