ವಿನಯ್ ಕುಮಾರ್ ಸೊರಕೆ ಸತತ ಸೋಲಿನಿಂದ ಹತಾಶರಾಗಿದ್ದಾರೆ – ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿಕೆ

ಕಾಪು : ಸತತ ಎರಡು ಬಾರಿಯ ಸೋಲಿನಿಂದ ವಿನಯ ಕುಮಾರ್ ಸೊರಕೆ ಕಂಗೆಟ್ಟಿದ್ದಾರೆ. ನಮ್ಮದೇ ಸರಕಾರ ಇದೆ, ನಾನು ಏನು ಆಗಿಲ್ಲ ಎಂಬ ಹತಾಶೆ ಅವರನ್ನು ಕಾಡುತ್ತಿದೆ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಲೇವಡಿ ಮಾಡಿದರು.

ಕಾಪುವಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಅವರು, ಚುನಾವಣೆಯಲ್ಲಿ ಸೋಲು ಗೆಲುವು ಸಹಜ. ಆದರೆ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು ಎಂದು ಸೊರಕೆಗೆ ಟಾಂಗ್ ನೀಡಿದರು. ಕಳೆದ ಬಾರಿ ನನ್ನ ಕೊನೆಯ ಚುನಾವಣೆ ಎಂದು ಹೇಳುತ್ತಾ ಜನರನ್ನು‌ ಭಾವನಾತ್ಮಕವಾಗಿ ಮರುಳು ಮಾಡುವ ಕೆಲಸ ಮಾಡಿದ್ದರು. ಅವರು ರಾಜಕೀಯದಲ್ಲಿ ನಿವೃತ್ತಿಯಾಗಲಿ ಎಂದು ನಾನು ಯಾವತ್ತೂ ಹೇಳುವುದಿಲ್ಲ. ಎಲ್ಲಿಯವರೆಗೆ ಅವರಿಗೆ ಶಕ್ತಿ, ತಾಕತ್ ಇರುತ್ತೊ ಅಲ್ಲಿಯವರೆಗೆ ಅವರು ಖಂಡಿತವಾಗಿಯೂ ರಾಜಕೀಯದಲ್ಲಿ ಇರಬೇಕು ಎಂದರು.

ಅವರಿಗೆ ಭಗವಂತಹ ಒಳ್ಳೆಯ ಬುದ್ಧಿಕೊಡಲಿ. ಅವರ ಹಿರಿತನ, ರಾಜಕೀಯ ಅನುಭವ, ಅವರ ಸುದೀರ್ಘ ರಾಜಕಾರಣವನ್ನು ಗೌರವಿಸುತ್ತೇನೆ. ಅವರು ಮಂತ್ರಿ ಪದವಿ ಕಳೆದುಕೊಂಡಾಗ ಮೊದಲನೇಯವನಾಗಿ ನಾನೇ ಅವರಿಗೆ ಸಾಂತ್ವನ ಹೇಳಿದ್ದೇನೆ. ರಾಜಕಾರಣದಲ್ಲಿ ಅಧಿಕಾರ ಬರುತ್ತೆ, ಹೋಗುತ್ತೆ ಎಂದಿದ್ದೆ. ಆದರೆ, ಅವರ ಮಂತ್ರಿ ಸ್ಥಾನ ಯಾವ ಕಾರಣಕ್ಕೆ ಹೋಯಿತು ಅಂತಾ ಇವತ್ತಿನವರೆಗೂ ನನಗೆ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.

ಸೊರಕೆ ಆಡಳಿತ ವ್ಯವಸ್ಥೆ, ಪೊಲೀಸ್ ಠಾಣೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ನನ್ನ ಮಾತು ಕೇಳದಿದ್ದರೆ ನಿನನ್ನು ಟ್ರಾನ್ಸ್ ಫಾರ್ ಮಾಡುತ್ತೇನೆಂದು ಸರಕಾರಿ ಅಧಿಕಾರಿ, ನೌಕರರನ್ನು ಬೆದರಿಸುತ್ತಿದ್ದಾರೆ. ಇದು ಒಳ್ಳೆದಲ್ಲ. ಸರಕಾರ ಬರುತ್ತೆ, ಹೋಗುತ್ತೆ‌. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಇದು ಕಳಂಕ ಎಂದು ಅವರು ಕಿಡಿಕಾರಿದರು. ಸೊರಕೆ ಸರಕಾರದಲ್ಲಿ ಆರ್ಥಿಕ‌ ಸಮಸ್ಯೆ ಇಲ್ಲ ಅಂತಾರೆ. ಆದರೆ, ಸಿಎಂ ಆರ್ಥಿಕ‌ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರೇ ಸರಕಾರದ ಆರ್ಥಿಕ ವ್ಯವಸ್ಥೆ ಸರಿಯಿಲ್ಲ. ನಮಗೆ ಯಾರಿಗೂ ಅನುದಾನ ಬರುತ್ತಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ನನಗೆ ಪರಿಚಯವಿರುವ ತುಂಬಾ ಜನ ಶಾಸಕರು ಕೂಡ ನಮಗೆ ಅನುದಾನ ಬರುತ್ತಿಲ್ಲ ಎನ್ನುತ್ತಿದ್ದಾರೆ‌ ಎಂದರು.

Related posts

ವಿಶ್ವದ ವೇಗದ ಭಗವದ್ಗೀತಾ ಲೇಖಕ : ಕೇವಲ 5.30 ಗಂಟೆಗಳಲ್ಲಿ 18 ಅಧ್ಯಾಯ ಮತ್ತು 700 ಶ್ಲೋಕಗಳ ಬರಹ ಪೂರ್ಣಗೊಳಿಸಿದ ಅದ್ಭುತ ಸಾಧನೆ!

Worlds Fastest Bhagvad Gita Writer Completing 18 Chapters & 700 Verses in Just 5.30 Hours

ಮೀನುಗಾರರ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಭಾಷಣ-ಹಿಂದೂ ಯುವಸೇನೆ ಮುಖಂಡನ ವಿರುದ್ಧ ಸುಮೊಟೋ ಕೇಸ್