ಉಡುಪಿ : ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಗವರ್ನರ್‌ಗೂ ಬಾಂಗ್ಲಾ ಪ್ರಧಾನಿ ಗತಿ ಆಗಲಿದೆ ಎಂಬ ಹೇಳಿಕೆಯನ್ನು ಬಿಜೆಪಿ ಬಲವಾಗಿ ಖಂಡಿಸಿದೆ.
ಬೇಲಿಯೇ ಎದ್ದು ಹೊಲ ಮೇಯ್ದಂತೆ, ರಾಜ್ಯದ ಮುಖ್ಯಮಂತ್ರಿ ಆವ್ಯವಹಾರದಲ್ಲಿ ತೊಡಗಿಕೊಂಡಾಗ ಅಭಿಯೋಜನೆಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಅವರು ತೀರ್ಪು ನೀಡಿದ್ದಲ್ಲ, ಕಾನೂನು ಹೋರಾಟ ನಡೆಸುವುದನ್ನು ಬಿಟ್ಟು ರಾಜ್ಯಪಾಲರ ಬಗ್ಗೆ ಹಗುರವಾಗಿ ಮಾತನಾಡುವುದು ಅವರ ಬಾಲಿಶತನವನ್ನು ತೋರಿಸುತ್ತದೆ. ದೊಡ್ಡವರನ್ನು ಮೆಚ್ಚಿಸುವುದಕ್ಕಾಗಿ ಬಾಯಿಗೆ ಬಂದ ಹಾಗೆ ಮಾತನಾಡುವುದು ಇವರ ಚಾಳಿ. ವಾಲ್ಮೀಕಿ ಹಗರಣ, ಮೂಡ ಸೈಟು ಹಗರಣ ಸೇರಿದಂತೆ ಕಾಂಗ್ರೆಸ್ ಹಗರಣಗಳ ಬಗ್ಗೆ ಜನಸಾಮಾನ್ಯರು ಮತ್ತೆ ಎಲ್ಲಿ ನ್ಯಾಯ ಕೇಳುವುದು?
2011ರಲ್ಲಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ ಅಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರ ವಿರುದ್ಧ ಅಭಿಯೋಜನೆಗೆ ಅನುಮತಿ ಕೊಟ್ಟಾಗ ಸಿದ್ದರಾಮಯ್ಯನವರು ಸ್ವಾಗತಿಸಿದರು. ಈಗ ಇವರ ಬಗ್ಗೆ ಬಂದಾಗ ವಿರೋಧ ಯಾಕೆ, ಇದು ಕಾಂಗ್ರೆಸ್‌ನ ಇಬ್ಬಗೆ ನೀತಿಯನ್ನು ಎತ್ತಿ ತೋರಿಸುತ್ತದೆ ಎಂದು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯಕುಮಾರ್ ಶೆಟ್ಟಿ ಹೇಳಿದ್ದಾರೆ.