ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಬ್ಬಾಳಿಕೆ, ಚಿನ್ಮಯ ಕೃಷ್ಣದಾಸ್ ಪ್ರಭು ಬಂಧನ‌ ಖಂಡಿಸಿ ವಿಎಚ್‌ಪಿ ಪ್ರತಿಭಟನೆ

ಮಂಗಳೂರು : ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಬ್ಬಾಳಿಕೆ ಹಾಗೂ ಇಸ್ಕಾನ್‌ನ ಚಿನ್ಮಯ ಕೃಷ್ಣದಾಸ್ ಪ್ರಭು ಬಂಧನ‌ ಖಂಡಿಸಿ ವಿಎಚ್‌ಪಿ ಮಂಗಳೂರಿನ ಕ್ಲಾಕ್ ಟವರ್ ಮುಂಭಾಗ ಪ್ರತಿಭಟನೆ ನಡೆಸಿತು.

ಪ್ರತಿಭಟನೆಯಲ್ಲಿ ವಿಎಚ್‌ಪಿ, ಬಜರಂಗದಳ ಕಾರ್ಯಕರ್ತರು ಬಾಂಗ್ಲಾದೇಶದ ವಿರುದ್ಧ ಘೋಷಣೆ ಕೂಗಿದರು. ತಕ್ಷಣ ಚಿನ್ಮಯ ಕೃಷ್ಣದಾಸ್ ಪ್ರಭುರನ್ನು ಬಿಡುಗಡೆ ಮಾಡಬೇಕೆಂದು ಪ್ರತಿಭಟನಾಕಾರರ ಒತ್ತಾಯಿಸಿದರು.‌ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗೆ ವಿಶ್ವಸಂಸ್ಥೆ, ವಿಶ್ವ ಸಮುದಾಯವು ಮುಂದಾಗಬೇಕೆಂದು ಒತ್ತಾಯಿಸಿದರು. ಈ ಪ್ರತಿಭಟನೆಯಲ್ಲಿ ವಿಎಚ್‌ಪಿ ಪ್ರಾಂತ ಅಧ್ಯಕ್ಷ ಎಂ.ಬಿ.ಪುರಾಣಿಕ್, ಮಾಣಿಲ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿ, ಓಂಶ್ರೀ ಮಠದ ಸ್ವಾಮಿ ಓಂ ಶ್ರೀ ವಿದ್ಯಾನಂದ ಸರಸ್ವತಿ, ಇಸ್ಕಾನ್‌ನ ಪ್ರತಿನಿಧಿಗಳು, ವಿಎಚ್‌ಪಿ-ಬಜರಂಗದಳದ ಕಾರ್ಯಕರ್ತರು ಭಾಗವಹಿಸಿದ್ದರು.

ವಿಎಚ್‌‌ಪಿ ಮುಖಂಡ ಶರಣ್ ಪಂಪ್‌ವೆಲ್ ಮಾತನಾಡಿ, ಮತೀಯವಾದಿ ಸಂಘಟನೆಗಳ ಕಪಿಮುಷ್ಠಿಯಲ್ಲಿ ಬಾಂಗ್ಲಾದೇಶವಿದೆ.‌ಬಾಂಗ್ಲಾದಲ್ಲಿ ಹಿಂದೂಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಬಾಂಗ್ಲಾದೇಶದಲ್ಲಿ, ಇಸ್ಲಾಮಿಕ್ ಮೂಲಭೂತವಾದಿ ಜಿಹಾದಿ ಅಟ್ಟಹಾಸ ಹೆಚ್ಚಾಗುತ್ತಿದೆ. ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಮೇಲೆ ನಿರಂತರ ಕಿರುಕುಳ ನೀಡಲಾಗುತ್ತಿದೆ.‌ಅಲ್ಪಸಂಖ್ಯಾತ ಹಿಂದೂಗಳ ರಕ್ಷಣೆಗೆ ಬಾಂಗ್ಲಾ‌ ಸರಕಾರ ಮುಂದಾಗಬೇಕು ಎಂದರು.

ಶಾಂತಿಯ ಸಂದೇಶ ಸಾರುವ ಇಸ್ಕಾನ್ ಅನ್ನು ಬಾಂಗ್ಲಾ ಸರಕಾರ ಬ್ಯಾನ್ ಮಾಡಲು ಹೊರಟಿದೆ.‌ ವಿನಾ ಕಾರಣ ಇಸ್ಕಾನ್‌ನ ಚಿನ್ಮಯ ಕೃಷ್ಣದಾಸ್‌ರರನ್ನು ಬಂಧಿಸಿ ಹಿಂದೂ ಸಮಾಜವನ್ನು ದಮನಿಸಲು ಬಾಂಗ್ಲಾ ಸರಕಾರ ಮುಂದಾಗಿದೆ.‌ ಭಾರತದಲ್ಲಿ ನುಸುಳು ಕೋರರಿದ್ದಾರೆ ಲಕ್ಷಾಂತರ ಮಂದಿ ಬಾಂಗ್ಲಾ ದೇಶಿಗಳಿದ್ದಾರೆ. ಭಾರತದ ಹಿಂದೂ ಸಮಾಜವನ್ನು ಕೆಣಕಬೇಡಿ. ಮುಂದೆ ಭಾರತದಲ್ಲಿ‌ ನಡೆಯುವ ಪರಿಣಾಮಗಳಿಗೆ ಬಾಂಗ್ಲಾ ಸರಕಾರವೇ ಹೊಣೆ ಆಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Related posts

ಮಾ.31ರಂದು ಬಜೆಟ್‌ನಲ್ಲಿ ಉಡುಪಿ ಜಿಲ್ಲೆಗೆ ಮಲತಾಯಿ ಧೋರಣೆ ತೋರಿದ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಪ್ರತಿಭಟನೆ

ವಿಶ್ವದ ವೇಗದ ಭಗವದ್ಗೀತಾ ಲೇಖಕ : ಕೇವಲ 5.30 ಗಂಟೆಗಳಲ್ಲಿ 18 ಅಧ್ಯಾಯ ಮತ್ತು 700 ಶ್ಲೋಕಗಳ ಬರಹ ಪೂರ್ಣಗೊಳಿಸಿದ ಅದ್ಭುತ ಸಾಧನೆ!

Worlds Fastest Bhagvad Gita Writer Completing 18 Chapters & 700 Verses in Just 5.30 Hours