ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ ಖಂಡಿಸಿ ದಕ್ಷಿಣ ಕನ್ನಡ ಬಂದ್‌ಗೆ ವಿ‌ಎಚ್‌ಪಿ ಕರೆ; ಖಾಸಗಿ ಬಸ್‌‌ಗಳ ಮೇಲೆ ಕಲ್ಲು ತೂರಾಟ; ಬಸ್ ಸಂಚಾರ ಸ್ಥಗಿತ

ಮಂಗಳೂರು : ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷತ್ ಶುಕ್ರವಾರ (ಮೇ-2), ದಕ್ಷಿಣ ಕನ್ನಡ ಬಂದ್‌ಗೆ ಕರೆ ನೀಡಿದೆ.

ಗುರುವಾರ ಮಂಗಳೂರಿನ ಬಜ್ಪೆ ಪರಿಸರದಲ್ಲಿ ನಡೆದ ಅಹಿತಕರ ಘಟನೆ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ದಿನಾಂಕ ಮೇ 5‌ರವರೆಗೆ ನಿಷೇದಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ಸುಹಾಸ್‌ ಹತ್ಯೆ ಕೇಸ್‌ ಸಂಬಂಧಿಸಿ ಮೇ.2ರ ಶುಕ್ರವಾರ ನಗರದ ಯೂನಿವರ್ಸಿಟಿ ಕಾಲೇಜ್ ಬಳಿ ಖಾಸಗಿ ಬಸ್‌‌ಗಳ ಮೇಲೆ ಕಲ್ಲು ತೂರಾಟ ನಡೆದಿದೆ.

ನಗರದ ಖಾಸಗಿ ಬಸ್‌ಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿದ್ದು, ಮೂರು ಬಸ್‌‌ಗಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

ಇಂದು ಮುಂಜಾನೆ ಚಲಿಸುತ್ತಿದ್ದ ಬಸ್‌‌ಗೆ ದುಷ್ಕರ್ಮಿಗಳ ತಂಡ‌ ಕಲ್ಲು ತೂರಿದ್ದು, ಈ ಹಿನ್ನೆಲೆ ನಗರದಲ್ಲಿ ಖಾಸಗಿ ಬಸ್ ಸಂಚಾರ ಸ್ಥಗಿತಗೊಂಡಿದೆ.

Related posts

ಮೀನು ಸಾಗಾಟದ ಲಾರಿಗೆ ದುಷ್ಕರ್ಮಿಗಳಿಂದ ಕಲ್ಲು- ದೂರು ದಾಖಲು

ಎಸ್‌ಎಸ್‌ಎಲ್‌ಸಿ ಫಲಿತಾಂಶ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಅಗ್ರಸ್ಥಾನ : ಯಶ್‌ಪಾಲ್ ಸುವರ್ಣ ಅಭಿನಂದನೆ

ಉಡುಪಿ ಘಟನೆ ಕುರಿತು ಮಾಹಿತಿ ಸಂಗ್ರಹಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್