ಹಿರಿಯ ಪಾಡ್ಡನ ಹಾಡುಗಾರ್ತಿ ಲಕ್ಷ್ಮೀ ಶೇರಿಗಾರ್ತಿ ನಿಧನ

ಉಡುಪಿ : ಹಿರಿಯ ಪಾಡ್ಡನ ಹಾಡುಗಾರ್ತಿ ಪಡುಅಲೆವೂರು ಪೆರುಪಾದೆ ಲಕ್ಷ್ಮೀ ಶೇರಿಗಾರ್ತಿ(98) ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

ನಾಟಿ ಗದ್ದೆಗಳಲ್ಲಿ, ಮದುವೆ ಮನೆಗಳಲ್ಲಿ ತುಳುನಾಡಿನ ವಿವಿಧ ದೈವಗಳ ಪಾಡ್ಡನಗಳನ್ನು ಹಾಡುವ ಮೂಲಕ ಇವರು ಖ್ಯಾತರಾಗಿದ್ದರು. ದೈವಾರಾಧಕರಾಗಿದ್ದ ಇವರು ಪಂಜುರ್ಲಿ, ಕೋಟಿ ಚೆನ್ನಯ, ಸಿರಿ ಪಾಡ್ಡನಗಳನ್ನು ಇತ್ತೀಚಿನವರೆಗೆ ಸುದಿರ್ಘವಾಗಿ ಹಾಡುತ್ತಿದ್ದರು. ಪಾಡ್ಡನ ಕ್ಷೇತ್ರದ ಅಪಾರ ಅನುಭವ ಸಾಧನೆಯನ್ನು ಗುರುತಿಸಿ ಇವರಿಗೆ ದೆಂದೂರು ಕೊಲ್ಲು ಕೃಷ್ಣ ಶೆಟ್ಟಿ ಫೌಂಡೇಶನ್ ವತಿಯಿಂದ ಕೊಲ್ಲು ಶೆಡ್ತಿ ಸ್ಮರಣಾರ್ಥ ಪಾಡ್ಡನ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಇವರು ಏಳು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ

ಕಾರು ಕಳವು ಗೈದ ಆರೋಪಿ ಪೊಲೀಸ್ ವಶಕ್ಕೆ