ಈದ್‌ಮಿಲಾದ್ ಮೆರವಣಿಗೆಯ ಮುಸುಕಿನ ಗುದ್ದಾಟ – ಬಜರಂಗದಳ, ವಿಎಚ್‌ಪಿಯಿಂದ ಬಿ‌.ಸಿ.ರೋಡ್ ಚಲೋ; ಜಮಾಯಿಸುತ್ತಿರುವ ಹಿಂದೂ ಸಂಘಟನೆ ಕಾರ್ಯಕರ್ತರು

ಬಂಟ್ವಾಳ : ಈದ್‌ಮಿಲಾದ್ ಮೆರವಣಿಗೆ ನಡೆಸಲು ಬಿಡಬಾರದೆಂದು ವಿಎಚ್‌ಪಿ ಮುಖಂಡ ಶರಣ್ ಪಂಪ್‌ವೆಲ್ ಹೇಳಿಕೆ ಹಾಗೂ ತಾಕತ್ತಿದ್ದರೆ ತಡೆಯಿರಿ ಎಂಬ ಕಾಂಗ್ರೆಸ್ ಮುಖಂಡನೋರ್ವನ ಆಡಿಯೋ ಹೇಳಿಕೆಯ ಮುಸುಕಿನ ಗುದ್ದಾಟ ಇಂದು ಬಜರಂಗದಳ, ವಿಎಚ್‌ಪಿಯಿಂದ ಬಿ‌.ಸಿ.ರೋಡ್ ಚಲೋ ನಡೆಯುವಲ್ಲಿವರೆಗೆ ತಲುಪಿದೆ. ಬಜರಂಗದಳ-ವಿಎಚ್‌ಪಿ ‘ಬಿ‌.ಸಿ.ರೋಡ್ ಚಲೋ’ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಜಮಾಯಿಸುತ್ತಿರುವ ದೃಶ್ಯ ಕಂಡು ಬರುತ್ತಿದೆ.

ಕೇಸರಿ ಶಾಲು ಧರಿಸಿ ಹಿಂದೂ ಕಾರ್ಯಕರ್ತರು ಬಿ.ಸಿ.ರೋಡ್‌‌ನ ರಕ್ತೇಶ್ವರಿ ದೇವಸ್ಥಾನದ ಬಳಿ ಜಮಾಯಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಿ.ಸಿ.ರೋಡ್‌ನಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ಎಸ್ಪಿ ಯತೀಶ್ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿದೆ.

ಸ್ಥಳದಲ್ಲಿ ಕೆ.ಎಸ್.ಆರ್.ಪಿ. ತುಕಡಿಗಳು, ಆರ್ಮ್ ರಿಸರ್ವ್ ಫೋರ್ಸ್ ಸೇರಿದಂತೆ ವಿವಿಧ ತುಕಡಿಗಳ ಮುಕ್ಕಾಂ ಹೂಡಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ.

ಬಂಟ್ವಾಳದಲ್ಲಿ ಶಾಂತಿಯುತ ಈದ್ ಮೆರವಣಿಗೆ ಆರಂಭವಾಗಿದ್ದು, ಬಂಟ್ವಾಳದ ಮೂರ್ನಾಲ್ಕು ಮಸೀದಿಯಿಂದ ಮೆರವಣಿಗೆ ನಡೆಯುತ್ತಿದೆ. ಮೆರವಣಿಗೆಗೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ.

Related posts

ಮಣಿಪಾಲದಲ್ಲಿ ಸಂಚಾರ ನಿಯಮ ಉಲ್ಲಂಘನೆ: ಐವರು ವಿದ್ಯಾರ್ಥಿಗಳು ಒಂದೇ ದ್ವಿಚಕ್ರ ವಾಹನದಲ್ಲಿ!

ಗ್ಯಾಸ್ ಹಚ್ಚುವಾಗ ಬೆಂಕಿ ತಗುಲಿ ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

ಉಡುಪಿ ಜಿಲ್ಲೆಯಲ್ಲಿ ಉಪವಾಸ, ಧ್ಯಾನದೊಂದಿಗೆ ಗುಡ್ ಫ್ರೈಡೆ ಆಚರಣೆ