ಉಡುಪಿ : ಕ್ರೈಸ್ತರ ಪ್ರಸಿದ್ಧ ಪ್ರಾರ್ಥನಾ ಕ್ಷೇತ್ರ ಗೋವಾದ ವಾಸ್ಕೋದಿಂದ ತಮಿಳುನಾಡಿನ ವೇಲಂಕಣಿಗೆ ತೆರಳುವ ಪ್ರಮುಖ ರೈಲಿಗೆ ಉಡುಪಿ ಹಾಗೂ ಕುಂದಾಪುರದಲ್ಲಿ ನಿಲುಗಡೆಗೆ ಅವಕಾಶ ನೀಡಿ ಕೇಂದ್ರ ಸರ್ಕಾರ ಆದೇಶೀಸಿದೆ.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಭಾರತೀಯ ಜನತಾ ಪಾರ್ಟಿ ಅಲ್ಪಸಂಖ್ಯಾತ ಮೋರ್ಚಾ ಉಡುಪಿ ಜಿಲ್ಲೆ ಇವರು ಮನವಿ ಮಾಡಿದ್ದು, ಅವರ ಮನವಿಯ ಮೇರೆಗೆ ವಾಸ್ಕೋ-ವೇಲಂಕಣಿ ವಿಶೇಷ ರೈಲಿಗೆ (17315) ಉಡುಪಿ-ಕುಂದಾಪುರದಲ್ಲಿ ನಿಲುಗಡೆಗೆ ಸಂಸದರು ಕೇಂದ್ರ ಸಚಿವರ ಬಳಿ ಮನವಿ ಸಲ್ಲಿಸಿದರು.
ಸಂಸದರ ಮನವಿಯನ್ನು ಪರಿಗಣಿಸಿ ಕೇಂದ್ರ ರೈಲ್ವೆ ಸಚಿವರು ಉಡುಪಿ ಹಾಗೂ ಕುಂದಾಪುರದಲ್ಲಿ ಮುಂಬರುವ ಟ್ರಿಪ್‌ಗಳಿಗೆ ನಿಲುಗಡೆಗೆ ಅವಕಾಶ ನೀಡಿ ಆದೇಶಿಸಿರುತ್ತಾರೆ.
ಕ್ರೈಸ್ತ ಸಮುದಾಯದ ವೇಲಂಕಣಿ ಚರ್ಚ್‌ನ ಜೊತೆಗೆ ಹಿಂದೂ ಧರ್ಮೀಯರಿಗೆ ತಮಿಳುನಾಡಿನ ತಿರುನಲ್ಲಾರ್ ಶನೀಶ್ವರ ದೇವಸ್ಥಾನ ಮತ್ತು ತಂಜಾವೂರಿನ ಬೃಹದೇಶ್ವರ ಸ್ವಾಮಿಯ ಭಕ್ತರಿಗೂ ಕೂಡಾ ಅನುಕೂಲ ಒದಗಿಸಲಿದೆ ಎಂದು ಸಂಸದ ಕೋಟ ತಿಳಿಸಿದ್ದಾರೆ.
ನಮ್ಮ ಮನವಿಗೆ ಪೂರಕವಾಗಿ ವಿಶೇಷ ಕೊಡುಗೆ ನೀಡಿದ ಪ್ರಧಾನಿ ನರೇಂದ್ರ ಮೋದಿಯವರು, ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಹಾಗೂ ವಿ. ಸೋಮಣ್ಣ ಮತ್ತು ಸಂಸದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇವೆ ರಂದು ಉಡುಪಿ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಪ್ರಕಟಣೆಯಲ್ಲಿ ತಿಳಿಸಿದೆ.