ಜಿಲ್ಲೆಯಾದ್ಯಂತ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ – ಆನೆಗುಡ್ಡೆ ದೇವಸ್ಥಾನದಲ್ಲಿ ಭಕ್ತರಿಂದ ವಿಶೇಷ ಪೂಜೆ

ಉಡುಪಿ : ದೇವಾಲಯಗಳ ನಗರ ಉಡುಪಿಯಲ್ಲೂ ವರಮಹಾಲಕ್ಷ್ಮಿ ವೃತವನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ. ನಿತ್ಯೋತ್ಸವದ ಬೀಡು ಎಂದು ಕರೆಯಲ್ಪಡುವ ಉಡುಪಿಯಲ್ಲಿ ಇದೀಗ ಉತ್ಸವಗಳ ಸರಣಿ ಈ ಮೂಲಕ ಆರಂಭವಾಗಿದೆ.

ಶ್ರಾವಣ ಶುಕ್ರವಾರವಾದ ಈ ದಿನ ಉಡುಪಿಯ ಲಕ್ಷ್ಮಿ ವೆಂಕಟೇಶ ದೇವಸ್ಥಾನದಲ್ಲಿ ಅದ್ಧೂರಿ ಪೂಜೆಗಳು ನಡೆಯುತ್ತಿವೆ. ವರಮಹಾಲಕ್ಷ್ಮಿ ವೃತದ ಜೊತೆಗೆ ದೇವಾಲಯದಲ್ಲಿ ವೈಭವದ ರಂಗ ಪೂಜೆ ಏರ್ಪಡಿಸಲಾಗಿದೆ. ಇದಕ್ಕಂತಲೇ ದೇವಾಲಯವನ್ನು ಬಗೆ ಬಗೆಯ ಹೂವುಗಳಿಂದ ಅಲಂಕರಿಸಲಾಗಿದೆ. ಲಕ್ಷ್ಮಿ ವೆಂಕಟೇಶ ದೇವರ ದರ್ಶನಕ್ಕೆ ಸಾವಿರಾರು ಭಕ್ತರು ಬರುತ್ತಿದ್ದಾರೆ. ಭಜನಾ ಸಪ್ತಾಹದ ಸಲುವಾಗಿ ಅಖಂಡ ಭಜನಾ ಮಹೋತ್ಸವಗಳು ದೇವಾಲಯದಲ್ಲಿ ನಡೆಯುತ್ತಿದೆ.

ಇನ್ನು ಉಡುಪಿ ಜಿಲ್ಲೆಯ ಪ್ರಸಿದ್ಧ ಕುಂದಾಪುರ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಸಂಕ್ರಾಂತಿ ಮತ್ತು ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ವಿಶೇಷ ಪೂಜೆ ನೆರವೇರಿತು. ಸಂಕ್ರಾಂತಿ ಹಿನ್ನೆಲೆಯಲ್ಲಿ ದೇವಳಕ್ಕೆ ಬೆಳಿಗ್ಗಿನಿಂದಲೇ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಏಕಾದಶಿ ಪ್ರಯುಕ್ತ ಯಾವುದೇ ಸೇವೆಗಳು ಲಭ್ಯವಿಲ್ಲದಿದ್ದರೂ ದೇವಳಕ್ಕೆ ಭಕ್ತರು ಭೇಟಿ ನೀಡುವ ಸಂಪ್ರದಾಯವಿದೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಪ್ರಥಮ ಬಾರಿಗೆ ಯಕ್ಷ ರಂಗದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ