ವೈದೇಹಿ ನಯನ್‌ತಾರಾ ಅವರಿಗೆ ಪಿಎಚ್‌ಡಿ ಪದವಿ

ಶಿರ್ವ : ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಆ್ಯಂಡ್‌ ಡಾಟಾ ಸೈನ್ಸ್‌ ವಿಭಾಗದ ಪ್ರಾಧ್ಯಾಪಕಿ ಪಿ. ವೈದೇಹಿ ನಯನ್‌ತಾರಾ ಅವರಿಗೆ ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯವು ಡಾಕ್ಟರೇಟ್‌ ಪದವಿ ನೀಡಿ ಗೌರವಿಸಿದೆ.

ವೈದೇಹಿ ಅವರು ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯದ ಮಣಿಪಾಲ್‌ ಇನ್ಸಿಟಿಟ್ಯೂಟ್‌ ಆಫ್‌ ಇನ್‌ಸ್ಟ್ರೆಮೆಂಟೇಶನ್‌ ಆ್ಯಂಡ್‌ ಕಂಟ್ರೋಲ್‌ ಎಂಜಿನಿಯರಿಂಗ್‌ ವಿಭಾಗದ ಪ್ರಾಧ್ಯಾಪಕಿ ಡಾ|ಸುರೇಖಾ ಕಾಮತ್‌ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ಕಂಪ್ಯೂಟರ್‌ ಎಯಿಡೆಡ್‌ ಡಯಾಗ್ನಾಸಿಸ್‌ ಸಿಸ್ಟಮ್‌ ಫಾರ್‌ ಡಿಟೆಕ್ಸ್‌ನ್‌ ಆ್ಯಂಡ್‌ ಕ್ಲಾಸಿಫಿಕೇಶನ್‌ ಆಫ್‌ ಲಿವರ್‌ ಟ್ಯೂಮರ್‌ ಯೂಸಿಂಗ್‌ ಕಂಪ್ಯೂಟೆಡ್‌ ಟೊಮೋಗ್ರಫಿ ಇಮೇಜ್‌ ಎಂಬ ಸಂಶೋಧನಾ ಪ್ರಬಂಧಕ್ಕೆ ಡಾಕ್ಟರೇಟ್‌ ಪದವಿ ಲಭಿಸಿದೆ.

ಪ್ರಾಧ್ಯಾಪಕಿಯ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಿಬಂದಿ ವರ್ಗದವರು ಅಭಿನಂದನೆ ವ್ಯಕ್ತಪಡಿಸಿದ್ದಾರೆ.

Related posts

ಯುವನಿಧಿಯ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಿ : ರಮೇಶ್ ಕಾಂಚನ್

ದೆಹಲಿಗೆ ಮಹಿಳಾ ಮುಖ್ಯಮಂತ್ರಿ : ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಸಂಭ್ರಮಾಚರಣೆ

ನಿಲ್ಲಿಸಿದ್ದ ಮೀನುಗಾರಿಕಾ ಬೋಟ್‌ನಲ್ಲಿ ಅಗ್ನಿ ಅವಘಡ – 15 ಲಕ್ಷ ರೂ.ನಷ್ಟ