ಅಂತರಾಷ್ಟ್ರೀಯ ಕಾಮನ್ ವೆಲ್ತ್ ಪಾರ್ಲಿಮೆಂಟ್ ಅಸೋಸಿಯೇಷನ್ ಚುನಾವಣೆಯಲ್ಲಿ ಮತ ಚಲಾಯಿಸಿದ ಯು.ಟಿ.ಖಾದರ್

ಮಂಗಳೂರು : ಅಂತರಾಷ್ಟ್ರೀಯ ಕಾಮನ್ ವೆಲ್ತ್ ಪಾರ್ಲಿಮೆಂಟ್ ಅಸೋಸಿಯೇಷನ್ ಸಂಸ್ಥೆಗೆ ನಡೆದ ಚುನಾವಣೆಯಲ್ಲಿ ಭಾರತವನ್ನು ಬೆಂಬಲಿಸಿದ ಜಾಂಬಿಯಾ ಪರ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್‌‌ರವರು ಮತ ಚಲಾಯಿಸಿದರು.

ಯು.ಟಿ.ಖಾದರ್ ಅವರು ಕರ್ನಾಟಕದ ಉಳ್ಳಾಲದಲ್ಲಿ ಹುಟ್ಟಿ ಬೆಳೆದ ಓರ್ವ ವ್ಯಕ್ತಿ. ಇವರು ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದ ಪ್ರತಿಷ್ಠಿತ ಸಂಸ್ಥೆಯ ಚುನಾವಣೆಯಲ್ಲಿ ಕರ್ನಾಟಕ ವಿಧಾನಸಭಾ ಸಭಾಧ್ಯಕ್ಷರಾಗಿ ಭಾರತದ ಪ್ರತಿನಿಧಿಯಾಗಿ, ಮತ ಚಲಾಯಿಸಲು ಅವಕಾಶ ದೊರಕಿದ್ದು ಇಡೀ ಕರ್ನಾಟಕಕ್ಕೆ ಹೆಮ್ಮೆಯ ವಿಚಾರ.

ಭಾರತ ಬೆಂಬಲಿಸಿದ ಜಾಂಬಿಯಾದ ಡಾ.ಕ್ರಿಸ್ಟೋಪರ್ ಕಲಿಲಾ ಗೆಲುವು ಸಾಧಿಸಿದ್ದು, ಮುಂದಿನ ಅವಧಿಗೆ CPA ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ತಾಯಿ ಹಾಗೂ ಇಬ್ಬರು ಮಕ್ಕಳು ನಾಪತ್ತೆ

ಡೀಸೆಲ್‌ ಲೋಡ್ ಟ್ಯಾಂಕರ್ ಪಲ್ಟಿಯಾಗಿ ಡೀಸೆಲ್‌ ಸೋರಿಕೆ; ರಸ್ತೆ ಸಂಚಾರಕ್ಕೆ ಅಡಚಣೆ