ಕ್ಯಾನ್ಸರ್ ಜಾಗೃತಿಗಾಗಿ 3ಡಿ ಕಲಾಕೃತಿ ಅನಾವರಣ

ಮಣಿಪಾಲ : ಮಣಿಪಾಲ ಕೆಎಂಸಿಯ ಸಮುದಾಯ ವೈದ್ಯಕೀಯ ವಿಭಾಗ ಸೆಂಟರ್ ಫಾರ್ ಕಮ್ಯುನಿಟಿ ಅಂಕೋಲಜಿಯ ಸಹಯೋಗದೊಂದಿಗೆ ವಿಶ್ವ ಕ್ಯಾನ್ಸ‌ರ್ ದಿನ ಆಚರಿಸಲಾಯಿತು. ಇದರ ಅಂಗವಾಗಿ ಕ್ಯಾನ್ಸ‌ರ್ ಜಾಗೃತಿ 3ಡಿ ಕಲಾಕೃತಿಯನ್ನು ಮಣಿಪಾಲ ಕೆಎಂಸಿಯ ಡೀನ್ ಡಾ. ಪದ್ಮರಾಜ್ ಹೆಗ್ಡೆ ಮತ್ತು ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಜಂಟಿಯಾಗಿ ಕೆಎಂಸಿಯ ಇಂಟರಾಕ್ಟ್ ಆವರಣದಲ್ಲಿ ಅನಾವರಣಗೊಳಿಸಿದರು.

ಸೆಂಟರ್ ಫಾರ್ ಕಮ್ಯುನಿಟಿ ಅಂಕೋಲಜಿಯ ಕೋ-ಆರ್ಡಿನೇಟರ್ ಡಾ.ರಂಜಿತಾ ಶೆಟ್ಟಿ ಕ್ಯಾನ್ಸ‌ರ್ ಪತ್ತೆ ಹಚ್ಚುವ ಮತ್ತು ನಿವಾರಿಸುವ ಕುರಿತ ಮಾಹಿತಿ ನೀಡಿದರು. ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ಅಶ್ವಿನಿ ಕುಮಾ‌ರ್ ಉಪಸ್ಥಿತರಿದ್ದರು. ಕ್ಯಾನ್ಸರ್ ಜಾಗೃತಿ 3ಡಿ ಕಲಾಕೃತಿಯನ್ನು ಶ್ರೀನಾಥ್ ಮಣಿಪಾಲ್ ಮತ್ತು ರವಿ ಹಿರೆಬೆಟ್ಟು ರಚಿಸಿದ್ದಾರೆ.

Related posts

ಉಡುಪಿ ಜಿಲ್ಲೆಯಲ್ಲಿ ಉಪವಾಸ, ಧ್ಯಾನದೊಂದಿಗೆ ಗುಡ್ ಫ್ರೈಡೆ ಆಚರಣೆ

ಬಿಎಸ್‌ಎನ್‌ಎಲ್ ಸಂಪರ್ಕದ ಕುಂದು ಕೊರತೆ, ಗುಣಮಟ್ಟ ಉತ್ತಮಗೊಳಿಸುವಿಕೆ ಸಭೆಯಲ್ಲಿ ಸಂಸದ ಕೋಟ ಭಾಗಿ

ನೇತ್ರಾವತಿ ಹೋರಾಟಕ್ಕೆ ಸಜ್ಜು – ತೋನ್ಸೆ ಜಯಕೃಷ್ಣ ಶೆಟ್ಟಿ