ಸ್ಪಂದಿಸದ ಸಂಬಂಧಿಕರು, ಆಶ್ರಯ ನೀಡಿದ ಹೊಸಬೆಳಕು

ಉಡುಪಿ : ನಿಟ್ಟೂರಿನಲ್ಲಿ ತಿಂಗಳ ಹಿಂದೆ ಮಲಮೂತ್ರಾದಿ ನಡುವೆಯೇ ಅನಾಗರಿಕವಾಗಿ ಬದುಕು ಸಾಗಿಸುತ್ತಿದ್ದ ವೃದ್ಧ ತಾಯಿ ಕಮಲ ಶೆಟ್ಟಿ ಹಾಗೂ ಮಾನಸಿಕ ಅಸ್ವಸ್ಥ ಮಗ ಅನಿಲ್ ಶೆಟ್ಟಿಯವರನ್ನು ವಿಶು ಶೆಟ್ಟಿ ಅಂಬಲಪಾಡಿ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಇದೀಗ ವೃದ್ದ ತಾಯಿಯನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದ್ದು ಸಂಬಂಧಿಕರು ಯಾರೂ ಸ್ಪಂದಿಸದೇ ಇರುವುದರಿಂದ ವಿಶು ಶೆಟ್ಟಿಯವರ ವಿನಂತಿಗೆ ಬೈಲೂರಿನ ಹೊಸಬೆಳಕು ಆಶ್ರಮದ ಮುಖ್ಯಸ್ಥೆ ತನುಲಾರವರು ಆಶ್ರಯ ನೀಡಲು ಸಮ್ಮತಿಸಿದ್ದು ವಿಶು ಶೆಟ್ಟಿ ಆಂಬುಲೆನ್ಸ್ ಮುಖಾಂತರ ವೃದ್ದೆಯನ್ನು ಕಾರ್ಕಳದ ಬೈಲೂರಿನ ಹೊಸಬೆಳಕು ಆಶ್ರಮಕ್ಕೆ ದಾಖಲಿಸಿದ್ದಾರೆ.

ಮಗ ಅನಿಲ್ ಶೆಟ್ಟಿ ಕೊಳಲಗಿರಿ ಸ್ವರ್ಗ ಆಶ್ರಮದಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಬಹಳಷ್ಟು ಸುಧಾರಿಸಿದ್ದಾರೆ. ಇನ್ನಾದರೂ ಸಂಬಂಧಿಕರು ಇದ್ದರೆ ಹೊಸ ಬೆಳಕು ಹಾಗೂ ಸ್ವರ್ಗ ಆಶ್ರಮ ಸಂಪರ್ಕಿಸಬೇಕೆಂದು ವಿಶು ಶೆಟ್ಟಿ ಅವರು ವಿನಂತಿಸಿದ್ದಾರೆ.

Related posts

₹ 5 ಲಕ್ಷ ವೆಚ್ಚದಲ್ಲಿ ನವೀಕೃತ ಅಂಬಾಗಿಲು ಮೀನು ಮಾರುಕಟ್ಟೆ ಉದ್ಘಾಟನೆ

ಮಲ್ಪೆಯಲ್ಲಿ ನವಜಾತ ಶಿಶು ಶವಪತ್ತೆ ಪ್ರಕರಣ; ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕುಮಾರ್ ಮಾಹಿತಿ

ಸಾಮಾಜಿಕ ಸಮಾನತೆ ಮತ್ತು ಸಹಬಾಳ್ವೆ ಅಂಬೇಡ್ಕರ್‌ರವರ ಆಶಯವಾಗಿತ್ತು : ಜಯನ್ ಮಲ್ಪೆ