ಪರವಾನಿಗೆ ಇಲ್ಲದ ಪಿಸ್ತೂಲ್ ಮಿಸ್‌ಫೈರ್ ಯುವಕನಿಗೆ ಗುಂಡೇಟು – ಪ್ರಕರಣ ದಾಖಲು

ಮಂಗಳೂರು : ಪರವಾನಿಗೆ ಇಲ್ಲದ ಪಿಸ್ತೂಲ್ ಮಿಸ್‌ಫೈರ್ ಆಗಿ ಯುವಕನಿಗೆ ಗುಂಡೇಟು ತಗುಲಿದ ಹಿನ್ನೆಲೆಯಲ್ಲಿ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜ.6ರಂದು ವಾಮಂಜೂರು ಬಳಿಯ ಸೆಕೆಂಡ್ ಹ್ಯಾಂಡ್ ಸೇಲ್ಸ್ ಬಝಾರ್‌‌ ಮಾಲಕ ಅದ್ದು ಅಲಿಯಾಸ್ ಬದ್ರುದ್ದೀನ್ (34) ಎಂಬಾತ ಪರವಾನಿಗೆ ಇಲ್ಲದ ಪಿಸ್ತೂಲ್ ಹೊಂದಿದ್ದ. ಈತ ತನ್ನ ಅಂಗಡಿಯಲ್ಲಿ ಕುಳಿತುಕೊಂಡು ಪಿಸ್ತೂಲ್ ಅನ್ನು ಪರೀಕ್ಷಿಸುತ್ತಿದ್ದ. ಈ ವೇಳೆ ಟ್ರಿಗ್ಗರ್ ಒತ್ತಿದ್ದಾನೆ. ಪರಿಣಾಮ ಫೈರ್ ಆಗ ಅಂಗಡಿಯಲ್ಲಿ ಕುಳಿತಿದ್ದ ಮೊಹಮ್ಮದ್ ಸಫ್ವಾನ್ (25) ಎಂಬಾತನಿಗೆ ಗುಂಡು ತಗುಲಿದೆ. ತಕ್ಷಣ ಗಾಯಾಳು ಸಫ್ವಾನ್‌ನನ್ನು ಜನಪ್ರಿಯ ಆಸ್ಪತ್ರೆಗೆ ರವಾನಿಸಲಾಗಿದೆ.

ಪರವಾನಿಗೆ ಇಲ್ಲದ ಪಿಸ್ತೂಲ್ ಅನ್ನು ಮೂಡುಶೆಡ್ಡೆ ನಿವಾಸಿ ಇಮ್ರಾನ್ ಎಂಬಾತ ಅದ್ದು ಅಲಿಯಾಸ್ ಬದ್ರುದ್ದೀನ್‌ನಿಗೆ ನೀಡಿದ್ದನು. ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಪೊಲೀಸರು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.

Related posts

ಆಕಸ್ಮಿಕವಾಗಿ ಬೆಂಕಿ – ಗೋಣಿ ಚೀಲ ಗೋದಾಮು ಸುಟ್ಟು ಭಸ್ಮ…!

ಮುಸುಕುಧಾರಿಗಳಿಂದ ಎಟಿಎಂ ದರೋಡೆಗೆ ವಿಫಲ ಯತ್ನ : ಆರೋಪಿಗಳ ಪತ್ತೆಗೆ 3 ವಿಶೇಷ ತಂಡ ರಚನೆ

ಕಾಪು ಅಮ್ಮನ ಬ್ರಹ್ಮಕಲಶೋತ್ಸವಕ್ಕೆ ಹರಿದ್ವಾರದಿಂದ ಬರಲಿದೆ ಗಂಗಾಜಲ