ಇಂದ್ರಾಳಿ ಪರಿಸರದಲ್ಲಿ‌ ಭೀತಿಯ ವಾತಾವರಣ ಸೃಷ್ಟಿಸಿದ ಅಪರಿಚಿತ ವ್ಯಕ್ತಿ : ಆಸ್ಪತ್ರೆಗೆ ದಾಖಲು

ಉಡುಪಿ : ಇಂದ್ರಾಳಿ ಪರಿಸರದಲ್ಲಿ‌ ಭೀತಿಯ ವಾತಾವರಣ ಸೃಷ್ಟಿಸಿದ ಅಪರಿಚಿತ ವ್ಯಕ್ತಿಯನ್ನು ಸಮಾಜಸೇವಕ ನಿತ್ಯಾನಂದ‌ ಒಳಕಾಡು ಅವರು, ಮಣಿಪಾಲ ಪೋಲಿಸರ ಸಹಕಾರದಿಂದ ವಶಕ್ಕೆ ಪಡೆದು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿರುವ ಘಟನೆ ಸೋಮವಾರ ನಡೆದಿದೆ.

ದಾಖಲಿಸಲ್ಪಟ್ಟಿರುವ ವ್ಯಕ್ತಿ ಮನೋರೋಗಿಯಾಗಿದ್ದು, ಪಶ್ಚಿಮ‌ ಬಂಗಾಳದವನೆಂದು ತಿಳಿದುಬಂದಿದೆ.‌

ವ್ಯಕ್ತಿಯ ಸಂಬಂಧಿಕರಿಗೆ ವಿಷಯ ಮುಟ್ಟಿಸಲಾಗಿದೆ. ಕರೆದೊಯ್ಯಲು ಪಶ್ಚಿಮ ಬಂಗಾಲದಿಂದ ಬರುವುದಾಗಿ ಹೇಳಿಕೊಂಡಿದ್ದಾರೆ.

ಕಾರ್ಯಚಾರಣೆಯಲ್ಲಿ ಸದಾನಂದ ಪೂಜಾರಿ, ವಿವೇಕ್, ವಿಕ್ರಮ್, ವಿಲಾಸ್ ನಾಯಕ್ ಮಂಚಿ, ನೆರವಾಗಿದ್ದರು.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ