ಅಪ್ರಾಪ್ತೆಗೆ ಮದುವೆ – ಪತಿ, ಹೆತ್ತವರ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

ಕಾಪು : ಅಪ್ರಾಪ್ತ ವಯಸ್ಕ ಯುವತಿಯನ್ನು ಮದುವೆಯಾಗಿ ಮಗುವಿನ ಜನ್ಮಕ್ಕೆ ಕಾರಣನಾದ ಪತಿ ಮತ್ತು ಆತನ ಮನೆಯವರ ವಿರುದ್ಧ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಹಾರ ಮೂಲದ ಚಾಂದನಿ ಕಾತೂನ್‌ ದೂರುದಾರ ಮಹಿಳೆ. ಆಕೆ ಪತಿ ಇಮ್ತಿಯಾಜ್‌ ದೇವನ್‌ ಹಾಗೂ ಮದುವೆಗೆ ಕಾರಣರಾಗಿದ್ದ ತನ್ನ ತಂದೆ ಮೊಹಮ್ಮದ್‌ ತಯ್ಯಬ್‌ ರಾಯಿನ್‌ ಮತ್ತು ತಾಯಿ ಜುಲೇಖಾ ಖಾತೂನ್‌ ವಿರುದ್ಧ ದೂರು ನೀಡಿದ್ದಾರೆ.

ಚಾಂದನಿ ಅವರಿಗೆ 16 ವರ್ಷ ತುಂಬಿದ್ದ ವೇಳೆ 2022 ಜೂನ್ 12ರಂದು ಇಮ್ತಿಯಾಜ್‌ನೊಂದಿಗೆ ಹೆತ್ತವರು ವಿವಾಹ ಮಾಡಿಕೊಟ್ಟಿದ್ದು, ಅನಂತರ ಪತಿಯ ಮನೆಯಲ್ಲಿ ವಾಸವಿದ್ದರು. ಆ ಬಳಿಕ 2023 ಎಪ್ರಿಲ್ 4ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

ಅನಂತರ ಮಗುವಿನೊಂದಿಗೆ ದಂಪತಿ ಉದ್ಯಾವರಕ್ಕೆ ಬಂದು ಬಾಡಿಗೆ ಮನೆಯಲ್ಲಿ ವಾಸವಿದ್ದರು. ಈ ವೇಳೆ ಚಾಂದನಿ ಮತ್ತೆ ಗರ್ಭಿಣಿಯಾಗಿದ್ದರು. ಗರ್ಭಿಣಿ ಮಹಿಳೆಗೆ ಜುಲೈ 13ರಂದು ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಚಿಕಿತ್ಸೆಯ ಬಗ್ಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ ವೇಳೆ ಅಪ್ರಾಪ್ತ ವಯಸ್ಸಿನಲ್ಲಿ ಮದುವೆ ಮಾಡಿಸಿರುವುದು ಬೆಳಕಿಗೆ ಬಂದಿತ್ತು.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !