ಅಪರೂಪದ ಮದುವೆಗೆ ಸಾಕ್ಷಿಯಾಯ್ತು ಉಡುಪಿಯ ರಾಜ್ಯ ಮಹಿಳಾ ನಿಲಯ

ಉಡುಪಿ : ಉಡುಪಿಯ ರಾಜ್ಯ ಮಹಿಳಾ ನಿಲಯ ಸಾರ್ಥಕ ಕ್ಷಣಕ್ಕೆ ಸಾಕ್ಷಿಯಾಯ್ತು. ಅನಾಥ ಹೆಣ್ಣು ಮಕ್ಕಳು ಹಾಗೂ ಮಹಿಳೆಯರ ಲಾಲನೆ ಪಾಲನೆ ನಡೆಸುವ ಮಹಿಳಾ ನಿಲಯದಲ್ಲಿ, ಅನಾಥ ಹೆಣ್ಣುಮಗಳಿಗೆ ಕಂಕಣ ಭಾಗ್ಯ ಕೂಡಿ ಬಂದಿತು. ಇದು ರಾಜ್ಯ ನಿಲಯದಲ್ಲಿ ನಡೆಯುತ್ತಿರುವ 25ನೇ ವಿವಾಹ.

ಸಂಸ್ಥೆ ಪ್ರಾರಂಭವಾದಾಗಿನಿಂದ ಈ ಸಾರ್ಥಕ ಕಾರ್ಯ ನಡೆಯುತ್ತಾ ಬಂದಿದೆ. ಬಾಲ್ಯದಿಂದಲೇ ಮಹಿಳಾ ನಿಲಯದಲ್ಲಿ ಬೆಳೆದ ಖುಷ್ಬು ಸುಮೇರ ಎಂಬ ಯುವತಿಯನ್ನು, ಶಿವಮೊಗ್ಗ ತೀರ್ಥಹಳ್ಳಿಯ ಅಂಬು ತೀರ್ಥದ ಮಧುರಾಜ್ ಎಂಬ ಯುವಕ ಮದುವೆಯಾಗಿದ್ದಾನೆ. ದಾನಿಗಳ ನೆರವಿನೊಂದಿಗೆ ಸ್ವತಹ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಅವರ ಮುಂದಾಳತ್ವದಲ್ಲಿ ಈ ವಿವಾಹ ಸಂಪನ್ನಗೊಂಡಿದೆ.

ಅನಾಥ ಯುವತಿಯರಿಗೆ ಹೊಸ ಬಾಳು ಕಲ್ಪಿಸುವ ಯೋಜನೆಗೆ ಉಡುಪಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯರ್ಥವಾಗಿದೆ. ಇದೊಂದು ಸುಧೀರ್ಘ ಪ್ರಕ್ರಿಯೆಯಾಗಿದ್ದು, ವಿವಾಹವಾಗಲು ಬಯಸುವ ಯುವಕನ ಪೂರ್ವಾಪರ ಆರ್ಥಿಕ, ಆರೋಗ್ಯ ಸ್ಥಿತಿ ಅರಿತು ಮಹಿಳಾ ನಿಲಯದಲ್ಲಿ ವಿವಾಹಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

Related posts

ಅಣ್ಣನಿಂದ ಲಕ್ಷಾಂತರ ರೂ. ಚಿನ್ನ ಪಡೆದು ತಂಗಿಯಿಂದಲೇ ವಂಚನೆ

ಬೆಳಕು ಮೀನುಗಾರಿಕೆ ಹಾಗೂ ಬುಲ್‌ಟ್ರಾಲ್ ಮೀನುಗಾರಿಕೆ ನಿಷೇಧ – ಉಲ್ಲಂಘಿಸಿದರೆ ಕಠಿಣ ಕ್ರಮ

ಮಾ.31ರಂದು ಬಜೆಟ್‌ನಲ್ಲಿ ಉಡುಪಿ ಜಿಲ್ಲೆಗೆ ಮಲತಾಯಿ ಧೋರಣೆ ತೋರಿದ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಪ್ರತಿಭಟನೆ