ಕಾಪು ಹಿಟ್ ಆಂಡ್ ರನ್ ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಉಡುಪಿ ಎಸ್‌ಪಿ

ಉಡುಪಿ : ಉಡುಪಿ ಜಿಲ್ಲೆ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳಪುವಿನಲ್ಲಿ ನಡೆದ ಕಾಪು ಹಿಟ್ ಆಂಡ್ ರನ್ ಪ್ರಕರಣದ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ.

ನವೆಂಬರ್ 13ರಂದು ಮಹಮ್ನದ್ ಹುಸೇನ್ ಎಂಬ ವ್ಯಕ್ತಿ ದ್ವಿಚಕ್ರ ವಾಹನದಲ್ಲಿ ಬರುವಾಗ ದುರಂತಕ್ಕೊಳಗಾದರು. ಕ್ರೈಂ ನಂಬರ್ 83/24 ಪ್ರಕಾರ ಪ್ರಕರಣ ದಾಖಲಾಗಿದ್ದು, ಸೆಕ್ಷನ್ 281 ಮತ್ತು 125 ಬಿಎನ್‌ಎಸ್ ಅಡಿ ಅಂದು ಪ್ರಕರಣ ದಾಖಲಿಸಲಾಗಿದೆ.

ಸಿಸಿಟಿವಿ ಫುಟೇಜ್ ಪರಿಶೀಲನೆ ನಡೆಸಿದಾಗ, ಅಪಘಾತದ ವೇಳೆ ಥಾರ್ ಗಾಡಿ ಅತಿ ವೇಗದಲ್ಲಿ ಓಡುತ್ತಿತ್ತು ಎಂದು ಗೊತ್ತಾಯಿತು. ಮುಂದಿನ ತನಿಖೆ ನಡೆಸಿದ ಬಳಿಕ, ಈ ವಾಹನ ಬೆಳಪು ಗ್ರಾಮದ ಪ್ರಜ್ವಲ್ ಶೆಟ್ಟಿ ಅವರಿದ್ದ ಎಂದು ಪತ್ತೆ ಹಚ್ಚಲಾಗಿದೆ.

ಆರೋಪಿಯ ವಾಹನ ಮತ್ತು ಅವನನ್ನು ವಶಪಡಿಸಿಕೊಂಡು, ವಾಹನವನ್ನು ಸೀಸ್ ಮಾಡಲಾಗಿದೆ. ಆರೋಪಿ ನ.14 ಬೆಳಿಗ್ಗೆ ಸ್ಟೇಷನ್ ಬೇಲ್ ಮೂಲಕ ಬಿಡುಗಡೆಗೊಂಡಿದ್ದಾರೆ.

ನವೆಂಬರ್ 14ರ ರಾತ್ರಿ ಮಹಮ್ಮದ್ ಹುಸೇನ್ ನಿಧನರಾಗಿದ್ದು, ನಾವು ಇತರೆ ಪ್ರಕ್ರಿಯೆಗಳು ಕೈಗೊಳ್ಳುತ್ತಿದ್ದು, ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಬೇಗನೆ ಸಲ್ಲಿಸುವುದಾಗಿ ತಿಳಿಸಿದ್ದೇನೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !