ತುಳು ಸಾಹಿತ್ಯ ಅಕಾಡೆಮಿ 30ನೇ ವರ್ಷದ ಸಂಭ್ರಮಾಚರಣೆ : ನೂತನ ಸಭಾಂಗಣ ಲೋಕಾರ್ಪಣೆ

ದಕ್ಷಿಣ ಕನ್ನಡ : ತುಳುಭವನದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಭಾಂಗಣದಲ್ಲಿ, ಅಕಾಡೆಮಿಯ 30ನೇ ವರ್ಷದ ಸಂಭ್ರಮಾಚರಣೆ ಮತ್ತು ಸಭಾಂಗಣ ಉದ್ಘಾಟನಾ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾರಾನಾಥ ಗಟ್ಟಿ ಕಾಪಿಕಾಡ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ತುಳು ಭಾಷೆ, ಸಂಸ್ಕೃತಿ ಅಧ್ಯಯನ, ದಾಖಲೀಕರಣ ಮಾಡುವ ಯೋಜನೆ ಹೊಂದಿದೆ. ತುಳುಭವನವನ್ನು ತುಳುನಾಡಿನ ಸಾಂಸ್ಕೃತಿಕ ಕೇಂದ್ರವನ್ನಾಗಿ ರೂಪಿಸಲಿದ್ದೇವೆ. ಮ್ಯೂಸಿಯಂ ಆರಂಭಿಸಲಿದ್ದೇವೆ’ ಎಂದರು.

ಸಭಾಂಗಣವನ್ನು ಉದ್ಘಾಟಿಸಿದ ಮಾಜಿ ಸಚಿವ ಬಿ.ರಮಾನಾಥ ರೈ, ‘ಸಮಾಜದಲ್ಲಿ ಸಾಮರಸ್ಯ ತರುವ ಶಕ್ತಿ ತುಳು ಭಾಷೆಗಿದೆ. ಪಂಚದ್ರಾವಿಡ ಭಾಷೆಗಳಲ್ಲೊಂದಾದ ಈ ಭಾಷೆ ಬಗ್ಗೆ ಹೆಮ್ಮೆ ಪಡಬೇಕೇ ಹೊರತು, ಕೀಳರಿಮೆ ಸಲ್ಲದು. ತುಳು ಸಾಹಿತ್ಯದ ಏಳಿಗೆಗಾಗಿ ದುಡಿದ ಅಮೃತ ಸೋಮೇಶ್ವರ ಅವರ ಹೆಸರನ್ನು ಈ ಸಭಾಂಗಣಕ್ಕೆ ಇಟ್ಟಿರುವ ಅಕಾಡೆಮಿಯು ಅವರ ಹೆಸರನ್ನು ಜನ ಸ್ಮರಿಸುವಂತೆ ಮಾಡಿದೆ’ ಎಂದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಜೋಕಿಂ ಸ್ವ್ಯಾನಿ ಅಲ್ವಾರಿಸ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಅಕಾಡೆಮಿಯ ಮಾಜಿ ಅಧ್ಯಕ್ಷ ಎ.ಸಿ. ಭಂಡಾರಿ, ತುಳು ಸಾಹಿತಿ ಇಂದಿರಾ ಹೆಗ್ಗಡೆ, ಪ್ರಮುಖರಾದ ಎಚ್.ಎಂ. ವಾಟ್ಸನ್, ಎಂ.ದೇವದಾಸ್, ಅಕಾಡೆಮಿಯ ರಿಜಿಸ್ಟ್ರಾರ್ ಪೂರ್ಣಿಮಾ ಉಪಸ್ಥಿತರಿದ್ದರು.

ದುರ್ಗಾ ಪ್ರಸಾದ್ ಕುಂಬ್ರ ನಿರೂಪಿಸಿದರು. ಉದ್ಯಾವರ ನಾಗೇಶ ಕುಮಾರ್ ಸ್ವಾಗತಿಸಿದರು.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ