ನೇಪಾಳದಲ್ಲಿ ತುಳು ಪ್ರೇಮ ಮೆರೆದ ಬಂಟ್ವಾಳದ ತುಳುವರು

ಮಂಗಳೂರು : ನೇಪಾಳಕ್ಕೆ ಭೇಟಿ ನೀಡಿರುವ ತುಳುನಾಡಿನ ಬಂಟ್ವಾಳದ ಯುವಕರ ತಂಡವೊಂದು, ಅಲ್ಲಿನ ಪಶುಪತಿ ಮತ್ತು ಮುಕ್ತಿನಾಥ ದೇವಸ್ಥಾನದಲ್ಲಿ ತುಳು ಧ್ವಜ ಅರಳಿಸಿ ತುಳು ಪ್ರೇಮ ಮೆರೆದಿದ್ದಾರೆ.

ನೇಪಾಳದಲ್ಲಿರುವ ಚೀನಾ ಗಡಿ ಪ್ರದೇಶದ ಸಮುದ್ರ ಮಟ್ಟದಿಂದ 13000 ಅಡಿ ಎತ್ತರದಲ್ಲಿರುವ ಮುಕ್ತಿನಾಥ ದೇವಸ್ಥಾನದಲ್ಲಿ ತುಳುವ ಯುವಕರ ತಂಡ ತುಳು ಧ್ವಜ ಅರಳಿಸಿದೆ.

ತುಳು ಭಾಷೆಯನ್ನು ಕೇಂದ್ರ ಸರ್ಕಾರವು 8ನೇ ಪರಿಚ್ಚೇದಕ್ಕೆ ಮತ್ತು ಕರ್ನಾಟಕ ಸರ್ಕಾರವು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನು ಘೋಷಿಸವಂತಾಗಬೇಕು ಎಂದು ಈ ವೇಳೆ ಯುವಕರ ತಂಡ ಪ್ರಾರ್ಥಿಸಿದೆ.

ಬಂಟ್ವಾಳ ತಾಲೂಕಿನ ನರಿಕೊಂಬುವಿನ ಜಯಶ್ರೀ, ಜಯಕುಮಾರ್‌ ನೇತೃತ್ವದಲ್ಲಿ ತುಳುನಾಡ ಅಭಿಮಾನಿ ಸದಸ್ಯರು ನೇಪಾಳಕ್ಕೆ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆಯೂ ತುಳು ಪ್ರೇಮವನ್ನು ಮೆರೆದುದಲ್ಲದೆ, ಜಾಗೃತಿಯನ್ನು ಮೂಡಿಸಿದರು.

ಕಳೆದ ವಾರ ನೇಪಾಳಕ್ಕೆ ತೆರಳುವ 117 ಮಂದಿ ಪ್ರಾಕೃತಿಕ ವಿಕೋಪದಿಂದಾಗಿ ದಾರಿ ಮಧ್ಯೆ ಸಿಲುಕಿದ್ದರು. ಆದರೆ ಜಯಕುಮಾರ್‌ ಮತ್ತು ಚಾಲಕರ ಧೈರ್ಯ ಹಾಗೂ ಸಮಯಪ್ರಜ್ಞೆಯಿಂದ ದೇವರ ದರುಶನ ಭಾಗ್ಯ ಸಿಕ್ಕಿದೆ.

Related posts

ಯುವನಿಧಿಯ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಿ : ರಮೇಶ್ ಕಾಂಚನ್

ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯಗೊಳಿಸಿ – ಕರ್ನಾಟಕ ಯುವರಕ್ಷಣಾ ವೇದಿಕೆ

ಸಚಿವ ಜಾರಕಿಹೊಳಿ ಅವರಿಂದ ಲೋಕೋಪಯೋಗಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ