ತ್ರಿವರ್ಣ ಕಲಾವಿದ್ಯಾರ್ಥಿಗಳಿಂದ ಬೀಚ್‌ನಲ್ಲಿ ‘ಓಂ ನಮಃ ಶಿವಾಯ’ ಮರಳು ಶಿಲ್ಪಾಕೃತಿ

ಕುಂದಾಪುರ : ಮಹಾ ಶಿವರಾತ್ರಿಯ ಪ್ರಯುಕ್ತ ಕೋಟೇಶ್ವರ ಕೋಡಿ ಬೀಚ್‌ನಲ್ಲಿ ಸುಂದರ ಮರಳುಶಿಲ್ಪವು ನೋಡುಗರ ಗಮನ ಸೆಳೆಯುತ್ತಿದೆ. ಬಿಲ್ವಪತ್ರೆ, ರುದ್ರಾಕ್ಷಿ ಮಾಲಾವೃತ ಶಿವಲಿಂಗವು ನಂದಿ ಮತ್ತು ಹಾವಿನೊಳಗೊಂಡ ಪಾಳುಬಿದ್ದ ಗುಡಿಯ ಪರಿಕಲ್ಪನೆಯಲ್ಲಿ ಮೂಡಿಬಂದಿದೆ. 12 ಅಡಿ ಅಗಲ ಮತ್ತು 4 ಅಡಿ ಎತ್ತರದ ಮರಳು ಶಿಲ್ಪಾಕೃತಿಯನ್ನು ಕುಂದಾಪುರದ ತ್ರಿವರ್ಣ ಕಲಾ ತರಗತಿಯ 23 ವಿದ್ಯಾರ್ಥಿಗಳು ರಚಿಸಿದ್ದಾರೆ. ಸಮಸ್ತ ಜನತೆಗೆ ಕಲಾಕೃತಿಯ ಮೂಲಕ ಶುಭ ಹಾರೈಸಿದ್ದಾರೆ. ಈ ಸಂದರ್ಭದಲ್ಲಿ ಕಲಾಕೇಂದ್ರದ ಮಾರ್ಗದರ್ಶಕ, ಕಲಾವಿದ ಹರೀಶ್ ಸಾಗಾರೊಂದಿಗೆ ಸಂತೋಷ್ ಭಟ್ ಹಾಲಾಡಿ ಮತ್ತು ವಿದ್ಯಾರಾಣಿ ಮಾರ್ಗದರ್ಶನ ಮಾಡಿದರು.

ಕಲಾ ವಿದ್ಯಾರ್ಥಿಗಳಾದ ಅದ್ವಿತ್ ಕುಮಾರ್, ಆರಾಂಶ್ ಪೂಜಾರಿ, ಶರಣ್ ಆರ್. ಕುಮಾರ್, ಅಯಾಂತಕ, ಕೃತಿ ದೇವಾಡಿಗ, ಸುಯೋಗ್ ಶೆಟ್ಟಿ, ಆಶಿತ್ ಸಂಜಯ್ ಕುಮಾರ್, ನಿಹಾಲ್ ಜಿ, ಶೌರ್ಯ ಎಸ್. ಪಿ., ಸಾನಿಧ್ಯ ಸಂತೋಷ್ ನಾಯ್ಸ್, ಲಶು ಜೆ. ಶೆಟ್ಟಿ, ಸಾನ್ವಿ ಎಲ್, ಯಕ್ಷತ್ ಶೆಟ್ಟಿ, ಸ್ಕಂದ, ನಿಶ್ಚಿತಾ ವಿ. ಹೆಚ್, ಅಮೃತ ಶೆಟ್ಟಿ, ಸನ್ನಿಧಿ ಜಿ, ಲಕ್ಷ್ಯಾ ಆರ್. ಅಶ್ವತ್ ಎಸ್, ಅಯಂತಿಕ ಆರ್. ಪೂಜಾರಿ, ಪ್ರಣೀತ್ ಶೆಟ್ಟಿ, ದೃಶಿಕಾ ಪಿ. ಶೆಟ್ಟಿ, ಪ್ರಾಪ್ತಿ ಪಿ. ಶೆಟ್ಟಿ, ಆರ್ಯಾ ಬಿ. ಕಲಾಕೃತಿ ರಚನೆಯಲ್ಲಿ ಭಾಗವಹಿಸಿದ್ದರು.

Related posts

ನಿಯಮ ಮೀರಿ ಸರಕಾರಿ ಜಮೀನಿನಲ್ಲಿ ಕಾಮಗಾರಿ : ತಹಶೀಲ್ದಾರ್‌ರಿಂದ ತಡೆ

ಬಾಲಕ ನಾಪತ್ತೆ ಪ್ರಕರಣ – ಶನಿವಾರ ಫರಂಗಿಪೇಟೆ ಬಂದ್‌ಗೆ ಕರೆ…

ವಾಮಾಚಾರ ಪ್ರಕರಣ – ಪ್ರಸಾದ್ ಅತ್ತಾವರ, ಆತನ ಪತ್ನಿ ತನಿಖೆಗೆ ಸಹಕರಿಸುತ್ತಿಲ್ಲ : ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್‌