ಬಲೆಗೆ ಸಿಕ್ಕಿದ ತಿಮಿಂಗಿಲವನ್ನು ಮರಳಿ ಸಮುದ್ರಕ್ಕೆ ಬಿಟ್ಟ ಮೀನುಗಾರರ ತಂಡಕ್ಕೆ ಗೌರವ

ಮಲ್ಪೆ : ಇತ್ತೀಚೆಗೆ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ವೇಳೆ ಬೋಟಿನ ಬಲೆಗೆ ಅಕಸ್ಮಿಕವಾಗಿ ಸಿಲುಕಿದ ಅಳಿವಿನಂಚಿನಲ್ಲಿರುವ ತಿಮಿಂಗಿಲವನ್ನು ಮರಳಿ ನೀರಿಗೆ ಬಿಟ್ಟ ಮೀನುಗಾರ ತಂಡ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಹಿನ್ನೆಲೆಯಲ್ಲಿ ಈ ತಂಡಕ್ಕೆ ಸನ್ಮಾನ ಕಾರ್ಯಕ್ರಮವನ್ನು ಶನಿವಾರ ಮಲ್ಪೆ ಬಂದರಿನ ಮೀನುಗಾರರ ಸಮುದಾಯ ಭವನದಲ್ಲಿ ಆಯೋಜಿಸಲಾಗಿತ್ತು.

ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನಾ ಕೇಂದ್ರ(ಸಿಎಂಎಫ್‌ಆರ್‌ಐ) ಮಂಗಳೂರು ಪ್ರಾದೇಶಿಕ ಕಚೇರಿ, ಮೀನುಗಾರಿಕೆ ಇಲಾಖೆ, ಮಂಗಳೂರು ಮೀನುಗಾರಿಕಾ ಕಾಲೇಜು ಹಾಗೂ ಕರ್ನಾಟಕ ರಾಜ್ಯ ಎಫ್‌ಐಪಿ-‌ಸ್ಮಾಲ್ ಪೆಲ್ಯಾಜಿಕ್ ಪರ್ಸಿನ್ ಫಿಶರೀಸ್ ಇವುಗಳ ಸಹಯೋಗ‌ದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಶ್ರೀದುರ್ಗಾಂಬಿಕ ಬೋಟಿನ ಕ್ಯಾಪ್ಟನ್‌ ಸದಾಶಿವ ಎಂ.ಮೆಂಡನ್ ಹಾಗೂ ಅವರ ತಂಡವನ್ನು ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಉಡುಪಿ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕಿ ಅಂಜನಾ ದೇವಿ, ಮಲ್ಪೆ ಪರ್ಸಿನ್ ಮೀನುಗಾರಿಕಾ ಸಂಘದ ಅಧ್ಯಕ್ಷ ನಾಗರಾಜ್ ಸುವರ್ಣ, ಆಳಸಮುದ್ರ ತಾಂಡೇಲರ ಸಂಘದ ಅಧ್ಯಕ್ಷ ರವಿರಾಜ್ ಸುವರ್ಣ, ಮಂಗಳೂರು ಮೀನುಗಾರಿಕಾ ಕಾಲೇಜಿನ ವಿಭಾಗ ಮುಖ್ಯಸ್ಥೆ ಡಾ.ಮೃದುಲ ರಾಜೇಶ್ ಉಪಸ್ಥಿತರಿದ್ದರು.

Related posts

ಷೇರು ವಹಿವಾಟಿನ ಬಗ್ಗೆ ಸಲಹೆ ನೀಡುವುದಾಗಿ ಯುವಕನಿಗೆ ವಂಚನೆ

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ರಕ್ತಸ್ರಾವ ಅಸ್ವಸ್ಥತೆ ಚಿಕಿತ್ಸಾಲಯ ಉದ್ಘಾಟನೆ – ಆಶಾ ಕಾರ್ಯಕರ್ತರಿಗಾಗಿ ಕಾರ್ಯಾಗಾರ

ತ್ಯಾಜ್ಯ ವಿಂಗಡಣೆ ಉಲ್ಲಂಘನೆಗೆ ಕಠಿಣ ದಂಡ ವಿಧಿಸಲು ಮಂಗಳೂರು ಮಹಾನಗರ ಪಾಲಿಕೆ ನಿರ್ಧಾರ