ಉಡುಪಿ : ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಗಾಂಜಾ ಸಾಗಾಟ ಮತ್ತು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಬಿಹಾರ ಮೂಲದ ಬ್ರಹಂದೇವ್ ಯಾದವ್(37) ಬಂಧಿತ ಆರೋಪಿ.
ಆರೋಪಿಯಿಂದ 60,680 ರೂ. ಮೊತ್ತದ 690 ಗ್ರಾಂ ಗಾಂಜಾ, 1 ಮೊಬೈಲ್ ಫೋನ್, ನಗದು 680 ರೂ. ಮತ್ತು ಇತರೆ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈತ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಣಿಪಾಲ ರೈಲ್ವೆ ನಿಲ್ದಾಣ ರಸ್ತೆಯಲ್ಲಿನ ಡಯಾನಾ ಟಾಕೀಸ್ ರಸ್ತೆಯ ಕ್ರಾಸ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ.
ಸೆನ್ ಪೊಲೀಸ್ ಠಾಣಾ ಪೊಲೀಸ್ ಉಪಾಧೀಕ್ಷಕರಾದ ಎ.ಸಿ ಲೋಕೇಶ್ ಮತ್ತು ಪೊಲೀಸ್ ನಿರೀಕ್ಷಕರಾದ ರಾಮಚಂದ್ರ ನಾಯಕ್ ಸಿಬ್ಬಂದಿಯವರಾದ ಎ.ಎಸ್.ಐ. ಉಮೇಶ್, ಪ್ರವೀಣ್ ಕುಮಾರ್, ಪ್ರವೀಣ್, ರಾಜೇಶ್, ರಾಘವೇಂದ್ರ, ವೆಂಕಟೇಶ್, ಸಂತೋಷ, ಧರ್ಮಪ್ಪ, ಅರುಣ್ ಕುಮಾರ್, ದಿಕ್ಷೀತ್, ಪವನ್, ನಿಲೇಶ್, ಪರಶುರಾಮ್, ಮುತ್ತಪ್ಪ, ಮಾಯ್ಯಪ್ಪ ಮತ್ತು ಚರಣ್‌ರವರ ತಂಡ ಬಂಧಿಸಿದ್ದಾರೆ.