ಬ್ಯಾಂಕ್‌ನ ಕಸ್ಟಮರ್‌ ಕೇರ್‌ ಎಂದು ನಂಬಿಸಿ ಖಾತೆಯಿಂದ ಹಣ ವರ್ಗಾವಣೆ – ದೂರು ದಾಖಲು

ಮಣಿಪಾಲ : ಬ್ಯಾಂಕ್‌ನ ಕಸ್ಟಮರ್‌ ಕೇರ್‌ ಎಂದು ನಂಬಿಸಿ ಮಾಹಿತಿ ಪಡೆದು ವ್ಯಕ್ತಿಯೊಬ್ಬರ ಖಾತೆಯಿಂದ ಸಾವಿರಾರು ರೂ. ಹಣವನ್ನು ವರ್ಗಾವಣೆ ಮಾಡಿರುವ ಘಟನೆ ಸಂಭವಿಸಿದೆ.

ಮಣಿಪಾಲದ ಶೇಖ್‌ ಅಬ್ದುಲ್‌ ಖಾದರ್‌ ಅವರು ಅಮೆಜಾನ್‌ ಐಸಿಐಸಿಐ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ ಹೊಂದಿದ್ದು, ಅವರ ಮೊಬೈಲ್‌ ಸಂಖ್ಯೆಗೆ ಅಪರಿಚಿತ ವ್ಯಕ್ತಿಯೊಬ್ಬರು ಕರೆ ಮಾಡಿ ಐಸಿಐಸಿಐ ಬ್ಯಾಂಕ್‌ ಕಸ್ಟಮರ್‌ ಕೇರ್‌ ಸೆಂಟರ್‌ನಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿದ್ದ. ನಂತರ ‘ನಿಮ್ಮ ಕಾರ್ಡ್‌ ಬದಲಾವಣೆ ಮಾಡಲಿಕ್ಕಿದೆ’ ಎಂದು ಮಾಹಿತಿ ಪಡೆದುಕೊಂಡ ಸ್ವಲ್ಪ ಸಮಯದಲ್ಲೇ ಕ್ರೆಡಿಟ್‌ ಕಾರ್ಡ್‌ನಿಂದ 51,180 ರೂ. ಮತ್ತೂಂದು ಅಕೌಂಟ್‌ಗೆ ವರ್ಗಾವಣೆಯಾಗಿದೆ. ಸದ್ಯ ಈ ಕುರಿತು ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಮಣಿಪಾಲದಲ್ಲಿ ಸಂಚಾರ ನಿಯಮ ಉಲ್ಲಂಘನೆ: ಐವರು ವಿದ್ಯಾರ್ಥಿಗಳು ಒಂದೇ ದ್ವಿಚಕ್ರ ವಾಹನದಲ್ಲಿ!

ಗ್ಯಾಸ್ ಹಚ್ಚುವಾಗ ಬೆಂಕಿ ತಗುಲಿ ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

ಜನಿವಾರ ತೆಗೆಸಿದ ಪ್ರಕರಣ – ಒಂದು ಸಮಾಜದ ಮೇಲೆ ದಬ್ಬಾಳಿಕೆ ಸರಿಯಲ್ಲ : ಕೋಟ