ಉಡುಪಿಯಿಂದ ಮಹಾಕುಂಭ ಮೇಳಕ್ಕೆ ರೈಲು – ಸಂಸದ ಕೋಟ ಮನವಿ

ಉಡುಪಿ : 144 ವರ್ಷಗಳಿಗೊಮ್ಮೆ ನಡೆಯುವ ಪ್ರಯಾಗ್ ರಾಜ್‌ನ ಮಹಾ ಕುಂಭ ಮೇಳಕ್ಕೆ ತೆರಳಬೇಕು ಎನ್ನುವ ಅಸಂಖ್ಯಾತ ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಭಾಗದ ಹಿಂದೂಗಳ ಆಸೆಗೆ ಪೂರಕವಾಗಿ ಉಡುಪಿಯಿಂದ ಕೊಂಕಣ ಮಾರ್ಗದಲ್ಲಿ ವಿಶೇಷ ಕುಂಭ ಮೇಳ ರೈಲು ಓಡಿಸುವಂತೆ ಕೇಂದ್ರ ರೈಲ್ವೇ ಸಚಿವ ಅಶ್ವಿನ್ ವೈಷ್ಣವ್ ಅವರ ಬಳಿ ಮನವಿ ಮಾಡಿದ್ದೇನೆ. ಮನವಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು ಶೀಘ್ರದಲ್ಲೇ ಕುಂಭ ಮೇಳ ವಿಶೇಷ ರೈಲನ್ನು ಉಡುಪಿ ಪ್ರಯಾಗ್ ರಾಜ್ ನಡುವೆ ಓಡಿಸುವುದಾಗಿ ಭರವಸೆ ನೀಡಿದ್ದಾರೆ.

ದೇಶಾದ್ಯಂತ ಎಲ್ಲಾ ನಗರಗಳಿಂದಲೂ ವಿಶೇಷ ರೈಲುಗಳು ಓಡುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆಯ ಕುಂಭ ಮೇಳ ಸೇವೆಗಳು ಉಡುಪಿ ಜಿಲ್ಲೆಯ ಅಸಂಖ್ಯಾತ ಭಕ್ತರಿಗೂ ಲಭಿಸಬೇಕು. ಈ ಕಾರಣದಿಂದ ವಿಶೇಷ ಪ್ರಯತ್ನ ನಡೆಸಿದ್ದು, ದೇಶಾದ್ಯಂತ ರೈಲು ಬೋಗಿಗಳ ಕೊರತೆಯ ಕಾರಣಗಳನ್ನು ಇಲಾಖೆ ನೀಡುತಿದ್ದರೂ ಸಾಮಾನ್ಯ ಜನರಿಗೂ ಕೈಗೆಟುಕಲಿ ಎಂಬ ದೃಷ್ಟಿಯಿಂದ ಜನರಲ್, ಮತ್ತು ಏಸಿ ಕೋಚ್ ಇರುವ ರೈಲಿನ ವ್ಯವಸ್ಥೆಗೆ ಮನವಿ ಇಟ್ಟಿದ್ದು, ಈ ಬಗ್ಗೆ ಶೀಘ್ರ ಪ್ರಕಟಣೆ ಹೊರ ಬರುವ ನಿರೀಕ್ಷೆ ಇಟ್ಟುಕೊಂಡಿದ್ದೇನೆ.

ಈ ಬೇಡಿಕೆ ಈಡೇರಿದ್ದಲ್ಲಿ ಕರಾವಳಿ ಭಾಗದ ಅಸಂಖ್ಯ ಭಕ್ತರು ಕಡಿಮೆ ವೆಚ್ಚದಲ್ಲಿ ಕುಂಭಮೇಳಕ್ಕೆ ತೆರಳುವ ಅವಕಾಶಗಳನ್ನು ಕಾಣಬಹುದಾಗಿದೆ ಎಂದು ಸಂಸದ ಕೋಟ ತಿಳಿಸಿದ್ದಾರೆ.

Related posts

ಶಿಕ್ಷಣತಜ್ಞ ಸೀತಾರಾಮ ಶೆಟ್ಟಿ ನಿಧನ

ಮುಸುಕುಧಾರಿಗಳಿಂದ ಎಟಿಎಂ ದರೋಡೆಗೆ ವಿಫಲ ಯತ್ನ : ಆರೋಪಿಗಳ ಪತ್ತೆಗೆ 3 ವಿಶೇಷ ತಂಡ ರಚನೆ

ಕಾಪು ಅಮ್ಮನ ಬ್ರಹ್ಮಕಲಶೋತ್ಸವಕ್ಕೆ ಹರಿದ್ವಾರದಿಂದ ಬರಲಿದೆ ಗಂಗಾಜಲ