ಕುಕ್ಕಿಕಟ್ಟೆ ಶ್ರೀ ಕೃಷ್ಣ ಬಾಲನಿಕೇತನಕ್ಕೆ ಟಾಪ್ಮಿ ಅಲ್ಯುಮ್ನಿ ಅಸೋಸಿಯೇಷನ್‌ನಿಂದ ಲ್ಯಾಪ್ ಟಾಪ್ ಪ್ರೊಜೆಕ್ಟರ್ ಕೊಡುಗೆ

ಉಡುಪಿ : ಮಣಿಪಾಲದ ಟಾಪ್ಮಿಅಲ್ಯುಮ್ನಿ ಅಸೋಸಿಯೇಷನ್‌ನಿಂದ ಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ನೀಡಲಾದ ಲ್ಯಾಪ್‌ಟಾಪ್ ಮತ್ತು ಪ್ರೊಜೆಕ್ಟರ್‌ನ್ನು ಇತ್ತೀಚಿಗೆ ಅಸೋಸಿಯೇಷನ್ ಕಾರ್ಯದರ್ಶಿ ಶ್ರೀ ರಾಜೇಂದ್ರ ಕಾಮತ್ ಇವರು ಬಾಲನಿಕೇತನದ ಕಾರ್ಯದರ್ಶಿ ರಾಮಚಂದ್ರ ಉಪಾಧ್ಯಾಯ‌ರಿಗೆ ಹಸ್ತಾಂತರಿಸಿದರು.

ಬಾಲನಿಕೇತನ ಮತ್ತು ಅಲ್ಲಿನ ಮಕ್ಕಳ ಅನುಕೂಲಕ್ಕಾಗಿ ನೀಡಲಾದ ಈ ಕೊಡುಗೆಯು ಬಹಳ ಉಪಯುಕ್ತವಾಗಿದ್ದು ಆ ಬಗ್ಗೆ ಸಹಕರಿಸಿದವರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಟಾಪ್ಮಿ ನಿವೃತ್ತ ಗ್ರಂಥಪಾಲಕ ಡಾ. ಮಂಜುನಾಥ, ಬಾಲನಿಕೇತನ ಆಡಳಿತ ಮಂಡಳಿಯ ಶ್ರೀ ರಘುರಾಮಾಚಾರ್ಯ, ಶ್ರೀ ಗುರುರಾಜ ಭಟ್, ಮಾತಾಜಿಯವರು ಮತ್ತು ಮಕ್ಕಳು ಉಪಸ್ಥಿತರಿದ್ದರು.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ

ಕಾರು ಕಳವು ಗೈದ ಆರೋಪಿ ಪೊಲೀಸ್ ವಶಕ್ಕೆ