ಇಂದಿನ ಶ್ರಾವಣದ ಹುಣ್ಣಿಮೆ ಸೂಪರ್ ಮೂನ್ ಬಲು ಚಂದ

ಉಡುಪಿ : 19‌ರ ಸೋಮವಾರ ಶ್ರವಣ ನಕ್ಷತ್ರದಲ್ಲಿ ಹುಣ್ಣಿಮೆ. ಈ ದಿನ ಸೂಪರ್ ಮೂನ್.

ಈ ಹುಣ್ಣಿಮೆಯಿಂದ ಮುಂದಿನ ಭಾದ್ರಪದ, ಆಶ್ವೀಜ, ಹಾಗೂ ಕಾರ್ತೀಕಗಳ ನಾಲ್ಕು ಹುಣ್ಣಿಮೆಗಳೂ ಸೂಪರ್ಮೂನ್‌ಗಳೇ.
ಸೂಪರ್ಮೂನ್ ಎಂದರೆ ಹುಣ್ಣಿಮೆಯಂದು ಚಂದ್ರ ಭೂಮಿಗೆ ಸುಮಾರು ಮೂವತ್ತು ಸಾವಿರ ಕಿಮೀ ಸಮೀಪ ಬರುವುದು. ಭೂಮಿಯಿಂದ ಸರಾಸರಿ 3 ಲಕ್ಷದ 84 ಸಾವಿರ ಕಿಮೀ ದೂರದಲ್ಲಿ ದೀರ್ಘವೃತ್ತಾಕಾರದಲ್ಲಿ ಸುತ್ತುವ ಚಂದ್ರ, 28 ದಿನಗಳಿಗೊಮ್ಮೆ 3 ಲಕ್ಷದ 56 ಸಾವಿರದವರೆಗೂ ಹತ್ತಿರ ಬರುವುದುಂಟು. ಆ ದಿನ ಹುಣ್ಣಿಮೆಯಾದರೆ, ಭೂಮಿಗೆ ಹತ್ತಿರ ಬಂದ ಚಂದ್ರ, ಸುಮಾರು 14 ಅಂಶ ದೊಡ್ಡದಾಗಿ ಕಂಡು ಸುಮಾರು 24ಅಂಶ ಹೆಚ್ಚಿನ ಪ್ರಭೆಯಿಂದ ಬೆಳಗುತ್ತಾನೆ.

ವರ್ಷದಲ್ಲಿ ಕೆಲ ಹುಣ್ಣಿಮೆಗಳು ಸೂಪರ್‌ಮೂನ್ ಆಗುವುದುಂಟು. ಆದರೆ ಈ ವರ್ಷ ಈ ಹುಣ್ಣಿಮೆಯಿಂದ ಸರಾಗ ನಾಲ್ಕೂ ಹುಣ್ಣಿಮೆಗಳೂ ಸೂಪರ್‌ಮೂನ್‌ಗಳೇ. ಆಗಸ್ಟ್ 19ರಂದು 3 ಲಕ್ಷದ 61 ಸಾವಿರದ 969 ಕಿ.ಮೀ ಆದರೆ, ಸಪ್ಟಂಬರ್ 18‌ರಂದು 3 ಲಕ್ಷದ 57 ಸಾವಿರದ 485, ಅಕ್ಟೋಬರ್ 17‌ರಂದು 3 ಲಕ್ಷದ 57 ಸಾವಿರದ 363 ಕಿಮೀ ಹಾಗೂ ನವಂಬರ್ 15‌ರಂದು 3 ಲಕ್ಷದ 61 ಸಾವಿರದ 866 ಕಿಮೀ. ಹುಣ್ಣಿಮೆಯೇ ಚೆಂದ. ಅದೂ ಸೂಪರ್‌ಮೂನ್ ಬಲು ಚೆಂದ.

ಡಾ. ಎ. ಪಿ. ಭಟ್

Related posts

ಅಣ್ಣನಿಂದ ಲಕ್ಷಾಂತರ ರೂ. ಚಿನ್ನ ಪಡೆದು ತಂಗಿಯಿಂದಲೇ ವಂಚನೆ

ಬೆಳಕು ಮೀನುಗಾರಿಕೆ ಹಾಗೂ ಬುಲ್‌ಟ್ರಾಲ್ ಮೀನುಗಾರಿಕೆ ನಿಷೇಧ – ಉಲ್ಲಂಘಿಸಿದರೆ ಕಠಿಣ ಕ್ರಮ

ಮಾ.31ರಂದು ಬಜೆಟ್‌ನಲ್ಲಿ ಉಡುಪಿ ಜಿಲ್ಲೆಗೆ ಮಲತಾಯಿ ಧೋರಣೆ ತೋರಿದ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಪ್ರತಿಭಟನೆ