ಟಿಪ್ಪರ್ ಡಿಕ್ಕಿ – ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಸಾವು

ಬ್ರಹ್ಮಾವರ : ಮಾಬುಕಳ ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಬಾರಕೂರು ಮಾಸ್ತಿನಗರದ ಮಮ್ತಾಜ್ (44) ಮೃತಪಟ್ಟಿದ್ದಾರೆ.

ಬಾರಕೂರಿನ ಪೂರ್ಣಿಮಾ ಮತ್ತು ಮಮ್ತಾಜ್ ಸ್ಕೂಟಿಯಲ್ಲಿ ಸಾಸ್ತಾನ ಕಡೆಗೆ ತೆರಳುತ್ತಿದ್ದರು. ಈ ಸಂದರ್ಭ ಹಿಂದಿನಿಂದ ಬರುತ್ತಿದ್ದ ಟಿಪ್ಪರ್ ಸ್ಕೂಟಿಗೆ ಡಿಕ್ಕಿ ಹೊಡೆದಿದೆ.

ಪರಿಣಾಮ ಇಬ್ಬರೂ ರಸ್ತೆಗೆ ಬಿದ್ದು ಗಾಯಗೊಂಡರು. ಅವರನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಮ್ತಾಜ್ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಅವರು ಹನೆಹಳ್ಳಿ ಗ್ರಾ.ಪಂ. ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.

ಚಾಲಕ ಟಿಪ್ಪ‌ರ್ ನಿಲ್ಲಿಸದೆ ಪರಾರಿಯಾಗಿದ್ದಾನೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ತಾಯಿ-ಮಗ ಜತೆಯಾಗಿ ವಿಷ ಸೇವನೆ : ಮಗ ಸಾವು; ತಾಯಿ ಸ್ಥಿತಿ ಗಂಭೀರ..

ಕಾರು ಹಾಗೂ ರಿಕ್ಷಾ ನಡುವೆ ಅಪಘಾತ; ನಾಲ್ವರಿಗೆ ಗಾಯ

ನಟ ರಿಷಬ್ ಶೆಟ್ಟಿಗೆ ವಾರಾಹಿ ಪಂಜುರ್ಲಿ ದೈವದ ಖಡಕ್ ಎಚ್ಚರಿಕೆ…!!