ಮಂಗಳೂರು : “ಟೈಮ್ಸ್ ಆಫ್ ಕುಡ್ಲ” ತುಳು ಪತ್ರಿಕೆಯ ಪ್ರಧಾನ ಸಂಪಾದಕ ಶಶಿ ಆರ್.ಬಂಡಿಮಾರ್ (41) ಅವದು ಬುಧವಾರ ರಾತ್ರಿ ನಾಗಾಲ್ಯಾಂಡ್‌ನಲ್ಲಿ ಹೃದಯಾಘಾತದಿಂದ ನಿಧನರಾದರು.
ಶಶಿ ಆರ್.ಬಂಡಿಮಾರ್ ತುಳು ಸಂಸ್ಕೃತಿ ಆಚಾರ ವಿಚಾರದ ಉಳಿವಿಗಾಗಿ ಶ್ರಮಿಸಿತ್ತಿದ್ದರು. ಇವರು “ಟೈಮ್ಸ್ ಆಫ್ ಕುಡ್ಲ” ಎಂಬ ತುಳು ವಾರಪತ್ರಿಕೆಯನ್ನು 15 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಅಲ್ಲದೆ ಸಣ್ಣ ಕೈಗಾರಿಕೆ, ಆತಿಥ್ಯ ಕ್ಷೇತ್ರದಲ್ಲೂ ಸಕ್ರಿಯವಾಗಿರುವ ಶಶಿಯವರು ನಾಗಾಲ್ಯಾಂಡ್‌ನಲ್ಲಿ ತನ್ನ ಮರದ ಫ್ಯಾಕ್ಟರಿಗೆ ಹೋಗಿದ್ದಾಗ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ.
ಶಶಿ ಬಂಡಿಮಾರ್ ಅವರಿಗೆ ಜೈ ತುಳುನಾಡ್ (ರಿ) ಸಂಘಟನೆ “ತುಳುವ ನೇಸರೆ” ಎನ್ನುವ ಬಿರುದು ಸೇರಿದಂತೆ ಅನೇಕ ಬಿರುದು ಪ್ರಶಸ್ತಿಗಳನ್ನು ಅನೇಕ ತುಳು ಸಂಘಟನೆಗಳು ನೀಡಿ ಗೌರವಿಸಿದ್ದವು.
ಮೃತರು ತಾಯಿ, ಪತ್ನಿ ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.