ಅಣಬೆ ತಿಂದು ಮೂವರು ಅಸ್ವಸ್ಥ – ಆಸ್ಪತ್ರೆಗೆ ದಾಖಲು

ಉಡುಪಿ : ರಸ್ತೆ ಬದಿಯ ಅಣಬೆ ತಿಂದು ಮೂವರು ಅಸ್ವಸ್ಥಗೊಂಡ ಘಟನೆ ಸಂಭವಿಸಿದ್ದು ಅವರನ್ನು ಉಡುಪಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಮಲ್ಪೆ ಸಮೀಪದ ತೊಟ್ಟಂನಲ್ಲಿ ನಡೆದಿದೆ.

ಗದಗ ಮೂಲದ ಅಣ್ಣಪ್ಪ(45), ಸುಜಾತ(25) ಹಾಗೂ ಸುಜಾತ ಅವರ ಮಗಳು ಸಂಗೀತ(7) ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದವರು.

ಕೂಲಿ ಕೆಲಸ ಮಾಡಿಕೊಂಡಿರುವ ಇವರು, ರಾತ್ರಿ ವೇಳೆ ರಸ್ತೆ ಬದಿಯಲ್ಲಿದ್ದ ಅಣಬೆಯನ್ನು ತಿಂದಿದ್ದರು. ಇದರಿಂದ ಇವರು ತಡರಾತ್ರಿ ವೇಳೆ ತೀವ್ರ ಅಸ್ವಸ್ಥಗೊಂಡಿದ್ದು, ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಆಪತ್ಥಾಂಧವ ಈಶ್ವ‌ರ್ ಮಲ್ಪೆ ಮತ್ತು ತಂಡ ಆಂಬುಲೆನ್ಸ್‌ ಮೂಲಕ ಈ ಮೂವರನ್ನೂ ಉಡುಪಿಯ ಆಸ್ಪತ್ರೆಗೆ ದಾಖಲಿಸಿದೆ. ವೈದ್ಯರು ನೀಡಿದ ಚಿಕಿತ್ಸೆಯಿಂದ ಮೂವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !