ಉಳ್ಳಾಲ ಈಜುಕೊಳದಲ್ಲಿ ಮುಳುಗಿ ಮೈಸೂರು ಮೂಲದ ಮೂವರ ಮೃತ್ಯು

ಉಳ್ಳಾಲ : ಇಲ್ಲಿನ ಖಾಸಗೀ ರೆಸಾರ್ಟ್‌ನ ಈಜುಕೊಳದಲ್ಲಿ ಮೈಸೂರುಮೂಲದ ಯುವತಿಯರು ಮೃತಪಟ್ಟ ಘಟನೆ ಇಂದು ನಡೆದಿದೆ.

ಮೈಸೂರು ಕುರುಬರ ಹಳ್ಳಿ ನಿವಾಸಿ ನಿಶಿತಾ ಎಂ. ಡಿ(21)ಮೈಸೂರು ರಾಮಾನುಜ ರಸ್ತೆ, ಕೆ‌ ಆರ್ ಮೊಹಲ್ಲಾ ನಿವಾಸಿ ಪಾರ್ವತಿ ಎಸ್(20) ಮೈಸೂರು ವಿಜಯನಗರ ದೇವರಾಜ ಮೊಹಲ್ಲಾ ಕೀರ್ತನ ಎನ್(21) ಸಾವನ್ನಪ್ಪಿರುವ ಯುವತಿಯರು. ಬೀಚ್ ಪ್ರವಾಸಕ್ಕೆ ಎಂದು ಮೈಸೂರುನಿಂದ ಉಳ್ಳಾಲ‌ಕ್ಕೆ ಬಂದು ಖಾಸಗೀ ರೆಸಾರ್ಟ್‌ನಲ್ಲಿ ತಂಗಿದ್ದರು. ಇಂದು ಬೆಳಿಗ್ಗೆ 10 ಘಂಟೆಗೆ ಈಜುಕೊಳಕ್ಕೆ ಇಳಿದಿದ್ದು ಉಸಿರುಗಟ್ಟಿ ಮೃತ ಪಟ್ಟಿದ್ದಾರೆ.

ರೀಲ್ಸ್‌ಗಾಗಿ ತಮ್ಮ ಫೂನ್ ರೆಕಾರ್ಡ್ ಮಾಡಿ ಇಟ್ಟಿದ್ದು. ವಿಡಿಯೋ ಮೊಬೈಲ್ ಹಾಗೂ ರೆಸಾರ್ಟ್‌ನ ಸಿ.ಸಿ.ಟಿವಿಯಲ್ಲಿ ದೃಶ್ಯ ದಾಖಲಾಗಿದೆ. ಉಳ್ಳಾಲ ಪೋಲಿಸ್ ಇನ್ಸಪೆಕ್ಟರ್ ಹೆಚ್.ಎನ್ ಬಾಲಕೃಷ್ಣ ನೇತೃತ್ವದ ತಂಡ ಘಟನಾ ಸ್ಥಳ‌ಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Related posts

ಮಣಿಪಾಲದಲ್ಲಿ ಸಂಚಾರ ನಿಯಮ ಉಲ್ಲಂಘನೆ: ಐವರು ವಿದ್ಯಾರ್ಥಿಗಳು ಒಂದೇ ದ್ವಿಚಕ್ರ ವಾಹನದಲ್ಲಿ!

ಗ್ಯಾಸ್ ಹಚ್ಚುವಾಗ ಬೆಂಕಿ ತಗುಲಿ ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

ನೇತ್ರಾವತಿ ಹೋರಾಟಕ್ಕೆ ಸಜ್ಜು – ತೋನ್ಸೆ ಜಯಕೃಷ್ಣ ಶೆಟ್ಟಿ