ಬಸ್ಸಿನಲ್ಲಿ ಚಿನ್ನದ ಸರ ಎಗರಿಸಿದ ಬಂಟ್ವಾಳದ ಮೂವರು ಕಳ್ಳಿಯರು ಅರೆಸ್ಟ್

ಬಸ್ ಹತ್ತುವಾಗ ಮಹಿಳೆಯ ಸರ ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಮನ್ನರಸಲ ದೇವಸ್ಥಾನಕ್ಕೆ ಭೇಟಿ ನೀಡಲು ಬಂದಿದ್ದ ಮಹಿಳೆಯೊಬ್ಬರ ಚಿನ್ನ ಸರ ಕದ್ದ ಆರೋಪದ ಮೇಲೆ ಮೂವರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಬಂಟ್ವಾಳ ನಿವಾಸಿಗಳಾದ ಚೋಟಮ್ಮ(52), ಲಕ್ಷ್ಮಿ(37) ಮತ್ತು ಕೆಂಡಮ್ಮ(47) ಎಂದು ಗುರುತಿಸಲಾಗಿದೆ.

ಮನ್ನಾರಸಾಲ ದೇವಸ್ಥಾನಕ್ಕೆ ದರ್ಶನಕ್ಕೆ ಬಂದಿದ್ದ ಕೊಲ್ಲಂ ಮೂಲದ ರಾಜಮ್ಮ ಎಂಬುವರ ಒಂದು ಮುಕ್ಕಾಲು ಪವನ್ ಚಿನ್ನದ ಸರವನ್ನು ಕದ್ದೊಯ್ದ ಘಟನೆ ಹರಿಪಾಡ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿತ್ತು.

ಬಸ್ ಹತ್ತುವಾಗ ಮೂವರು ಮಹಿಳೆಯರು ಕೈಚಳಕ ತೋರಿಸಿದ್ದಾರೆ. ಇದನ್ನು ಗಮನಿಸಿದ ರಾಜಮ್ಮ ಗಲಾಟೆ ಮಾಡಿದ್ದು, ಇತರೆ ಪ್ರಯಾಣಿಕರು ಯುವತಿಯರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ತಪಾಸಣೆ ವೇಳೆ ಬ್ಯಾಗ್‌ನೊಳಗೆ ಕಳ್ಳತನವಾದ ಸರ ಪತ್ತೆಯಾಗಿದೆ.

Related posts

ಮಂಗಳೂರು ವಿವಿಯಿಂದ ಯಕ್ಷ ಮಂಗಳ ಪ್ರಶಸ್ತಿ ಪ್ರದಾನ

National Fame Award of India Books of Award – Sushanth Brahmavar

ಯಕ್ಷಗಾನ ಹಾಸ್ಯಗಾರ ಮುಖ್ಯಪ್ರಾಣ ಕಿನ್ನಿಗೋಳಿ ನಿಧನಕ್ಕೆ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಸಂತಾಪ