ಸಿಬಿಐ ಅಧಿಕಾರಿ ಹೆಸರಿನಲ್ಲಿ ಬೆದರಿಕೆ ಕರೆ

ಉಪ್ಪಿನಂಗಡಿ : ಸಿಬಿಐ ಅಧಿಕಾರಿ ಹೆಸರಿನಲ್ಲಿ ಹಣ ಕಬಳಿಸುವ ಜಾಲದ ಕರೆಯೊಂದು ಉಪ್ಪಿನಂಗಡಿ ನಿವಾಸಿಗೆ ಬಂದಿದ್ದು, ಅವರ ಸಮಯಪ್ರಜ್ಞೆಯ ನಡೆಯಿಂದಾಗಿ ವಂಚನೆಗೊಳಗಾಗುವುದು ತಪ್ಪಿಹೋಗಿದೆ.

ಕರೆ ಮಾಡಿರುವ ವ್ಯಕ್ತಿ ನಾನು ಸಿಬಿಐ ಆಫೀಸರ್‌, ಇಂತಹಾ ಹೆಸರಿನವನು ನಿಮ್ಮ ಮಗನಾ? ಅವನ ಚಟುವಟಿಕೆಯ ಬಗ್ಗೆ ನಿಮಗೆ ಅರಿವಿದೆಯಾ? ಅವನನ್ನು ತತ್‌ಕ್ಷಣ ಬಂಧಿಸಬೇಕಾಗುತ್ತದೆ. ಎಂದೆಲ್ಲಾ ಬೆದರಿಸಿರುತ್ತಾರೆ.

ಉಪ್ಪಿನಂಗಡಿಯ ಬ್ಯಾಂಕ್‌ ರಸ್ತೆಯ ನಿವಾಸಿ ಅಬ್ಟಾಸ್‌ ಅವರ ಮೊಬೈಲ್‌ಗೆ 92‑347####608 ಸಂಖ್ಯೆಯಿಂದ ಕರೆ ಬಂದಿದ್ದು, ಹಿಂದಿ ಭಾಷೆಯಲ್ಲಿ ತಾನು ಸಿಬಿಐ ಆಫೀಸರ್‌ ಆಗಿದ್ದು, ದಿಲ್ಲಿ ಕಚೇರಿಯಿಂದ ಮಾತಾನಾಡುತ್ತಿದ್ದೇನೆ. ಅಬ್ಟಾಸ್‌ ಅವರ ಪ್ರಥಮ ವರ್ಷದ ಎಂಜಿನಿಯರಿಂಗ್‌ ಕಲಿಯುತ್ತಿರುವ ಮಗನ ಹೆಸರನ್ನು ಉಲ್ಲೇಖೀಸಿ ಮಾತನಾಡಿದ್ದಾನೆ.

ಕರೆ ಬಂದ ನಂಬರ್‌ನ ಪ್ರೊಫೈಲ್‌ ಪೋಟೋ ಕೂಡಾ ಪೊಲೀಸ್‌ ಆಫೀಸರ್‌ನಂತಿರುವ ವ್ಯಕ್ತಿಯದ್ದಾಗಿತ್ತು. ನಂಬರಿನ ಕೆಳಗಡೆ ಸಿಬಿಐ ಎಂದೂ ದಾಖಲಿಸಲ್ಪಟ್ಟಿರುವುದು ಕಂಡುಬಂದಿದೆ. ಆದರೆ ಅಬ್ಬಾಸ್‌ರವರ ಸಮಯಪ್ರಜ್ಞೆಯಿಂದಾಗಿ ವಂಚನೆಗೊಳಗಾಗುವುದು ತಪ್ಪಿಹೋಗಿದೆ.

Related posts

ಮಂಗಳೂರು ವಿವಿಯಿಂದ ಯಕ್ಷ ಮಂಗಳ ಪ್ರಶಸ್ತಿ ಪ್ರದಾನ

National Fame Award of India Books of Award – Sushanth Brahmavar

ಯಕ್ಷಗಾನ ಹಾಸ್ಯಗಾರ ಮುಖ್ಯಪ್ರಾಣ ಕಿನ್ನಿಗೋಳಿ ನಿಧನಕ್ಕೆ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಸಂತಾಪ