ಮನೆಗೆ ನುಗ್ಗಿದ ಕಳ್ಳರು; ಹಣ ಹಾಗೂ ಚಿನ್ನಾಭರಣ ಕಳವುಗೈದು ಎಸ್ಕೇಪ್!

ಹಿರಿಯಡ್ಕ : ಉಡುಪಿ ಜಿಲ್ಲೆಯ ಹಿರಿಯಡ್ಕ ಸಮೀಪ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಕಳ್ಳರು ಮನೆಯ ಬೀಗ ಮುರಿದು ನಗದು ಮತ್ತು ಚಿನ್ನಾಭರಣಗಳನ್ನು‌ ಕಳ್ಳತನ ಮಾಡಿದ ಘಟನೆ ನಡೆದಿದೆ.

ಬೆಳ್ಳಂಪಳ್ಳಿ ನಿವಾಸಿ ಮಾಲತಿ ಎಂಬವರ ಮನೆಯಲ್ಲಿ ಕಳ್ಳತನ ಸಂಭವಿಸಿದೆ. ಹಿರಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಘಟನೆ ವಿವರ : ಬೆಳ್ಳಂಪಳ್ಳಿ ಗ್ರಾಮದ ಮಾಲತಿ (45), ಇವರು ನರ್ಸ್‌ ಕೆಲಸ ಮಾಡುತ್ತಿದ್ದು ಬೆಳಿಗ್ಗೆ 8:30 ಗಂಟೆಗೆ ಹೋಗಿ ಸಂಜೆ 5:20 ಕ್ಕೆ ಮನೆಗೆ ಬರುವುದಾಗಿದೆ. ಇವರ ಗಂಡ ಸ್ಕೂಟರ್‌ನಲ್ಲಿ ಕೆಲಸಕ್ಕೆ ಹೋಗಿರುತ್ತಾರೆ. ಮೇ 13 ರಂದು ಪಿರ್ಯಾದಿದಾರರ ದೊಡ್ಡ ಮಗ ಬೆಳಿಗ್ಗೆ ಮನೆಗೆ ಬೀಗ ಹಾಗಿ ಸಮೀಪದ ಅಜ್ಜಿ ಮನೆಗೆ ಹೋಗಿದ್ದು ಮಧ್ಯಾಹ್ನ 2:00 ಗಂಟೆಗೆ ಪಿರ್ಯಾದಿದಾರರ ಗಂಡ ಪಿರ್ಯಾದಿದಾರರು ಕೆಲಸ ಮಾಡುತ್ತಿದ್ದ ಆಸ್ಪತ್ರೆಗೆ ಬಂದು ಯಾರೋ ಕಳ್ಳರು ಮನೆಯ ಬೀಗ ಮುರಿದು ಗೋದ್ರೇಜ್‌ ನಲ್ಲಿದ್ದ ಚಿನ್ನ ಮತ್ತು ನಗದನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ತಿಳಿಸಿದ್ದು ಕೂಡಲೆ ಮನೆಗೆ ಬಂದು ನೋಡಲಾಗಿ ಯಾರೋ ಕಳ್ಳುರು ಮನೆಯ ಮುಂಭಾಗದ ಬಾಗಿಲಿನ ಚಿಲಕವನ್ನು ಮೀಟಿ ಮನೆಯ ಒಳಗೆ ಪ್ರವೇಶಿಸಿ ಮನೆಯ ಒಳಗಿದ್ದ ಗೋದ್ರೇಜ್‌ನ ಬಾಗಿಲು ಮತ್ತು ಲಾಕರ್‌ನ್ನು ಮೀಟಿ ಅದರಲ್ಲಿದ್ದ 35,000/- ರೂಪಾಯಿ ನಗದು ಹಣ ಹಾಗೂ 41 ಗ್ರಾಂ ತೂಕದ ಚಿನ್ನಾಭರಣಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಅನುಮಾನಾಸ್ಪದ ವ್ಯಕ್ತಿಗಳು, ಬೋಟ್‌ಗಳು ಕಂಡುಬಂದಲ್ಲಿ‌ ಮಾಹಿತಿ ನೀಡುವಂತೆ ಮೀನುಗಾರರಿಗೆ ಸೂಚನೆ

‘ಉಡುಪಿ ಸಂಜೀವಿನಿ’ ಉತ್ಪನ್ನ ಮಾರುಕಟ್ಟೆಗೆ ಬಿಡುಗಡೆ

ಮೇ 17 ರಂದು ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ