ಉಡುಪಿ : ಕರ್ನಾಟಕ ಬಂದ್‌ಗೆ ಇಂದು ಕನ್ನಡಪರ ಸಂಘಟನೆಗಳು ಕರೆನೀಡಿದ್ದರೂ ಕರಾವಳಿ ಜಿಲ್ಲೆ ಉಡುಪಿಯಲ್ಲಿ ಎಂದಿನಂತೆ ಜನಜೀವನ ಯಥಾ ಸ್ಥಿತಿಯಲ್ಲಿದೆ. ಖಾಸಗಿ ಬಸ್‌ಗಳ ಓಡಾಟ ಅಭಾದಿತವಾಗಿದ್ದು ಸರ್ಕಾರಿ ಬಸ್‌ಗಳು ಕೂಡ ಎಂದಿನಂತೆ ಸಂಚಾರ ನಡೆಸುತ್ತಿವೆ.
ಆಟೋ ಕ್ಯಾಬ್ ಸಂಚಾರದಲ್ಲೂ ಕೂಡ ವ್ಯತ್ಯಯ ಆಗಿಲ್ಲ. ಸ್ಥಳೀಯವಾಗಿಯೂ ಇಲ್ಲಿ ಬಂದ್‌ಗೆ ಯಾವುದೇ ಸಂಘಟನೆಗಳು ಕರೆ ನೀಡಿಲ್ಲ. ಉಡುಪಿಯಲ್ಲಿ ಪ್ರತಿಭಟನೆ ಕೂಡ ನಿಗದಿಯಾಗಿಲ್ಲ. ಅಂಗಡಿ ಮುಂಗಟ್ಟುಗಳು ಎಂದಿನಂತೆ ತೆರೆದಿದ್ದು ವ್ಯಾಪಾರ ನಡೆಸುತ್ತಿವೆ. ಖಾಸಗಿ ಬಸ್ ಮಾಲಕರು, ಟ್ಯಾಕ್ಸಿ, ಆಟೋ ಸಂಘಟನೆಗಳು ಬಂದ್‌ಗೆ ಕೇವಲ ನೈತಿಕ ಬೆಂಬಲವಷ್ಟೇ ನೀಡಿದ್ದು ಸಂಚಾರ ಸ್ಥಗಿತಗೊಳಿಸಿಲ್ಲ.