ಉಡುಪಿ : ಕೇಂದ್ರ ಹಾಗೂ ರಾಜ್ಯ ಸರಕಾರದ ಸೂಚನೆಯಂತೆ ಪಾಕಿಸ್ಥಾನದ ಪ್ರಜೆಗಳನ್ನು ಗುರುತಿಸುವ ಕೆಲಸ ಆರಂಭಗೊಂಡಿದ್ದು, ಉಡುಪಿ ಜಿಲ್ಲೆಯಲ್ಲಿ ಯಾರು ಕೂಡ ಪಾಕಿಸ್ಥಾನದ ಪ್ರಜೆಗಳು ಇಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಕೆ. ಅರುಣ್ ತಿಳಿಸಿದ್ದಾರೆ.
ಈ ನಡುವೆ ಗುಪ್ತಚರ ಇಲಾಖೆಯ ಮೂಲಕ ಈಗಾಗಲೇ ವಿವಿಧ ರೀತಿಯಿಂದ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ. ಶ್ವಾನದಳದಿಂದ ಮಲ್ಪೆ ಬೀಚ್ ಹಾಗೂ ಬಂದರು ಪ್ರದೇಶ, ಶ್ರೀಕೃಷ್ಣ ಮಠ, ರೈಲು ನಿಲ್ದಾಣ ಸಹಿತ ವಿವಿಧ ಧಾರ್ಮಿಕ ಕ್ಷೇತ್ರಗಳು, ಪ್ರವಾಸಿ ತಾಣಗಳಲ್ಲಿ ತಪಾಸಣೆ ನಡೆಸಲಾಗಿದೆ. ಯಾವುದೇ ಅನುಮಾನಸ್ಪದ ವ್ಯಕ್ತಿಗಳು ಪತ್ತೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಇತ್ತ ಕರಾವಳಿ ಕಾವಲು ಪಡೆಯೂ ಸಮುದ್ರ ತೀರದಲ್ಲಿ ಗಸ್ತು ಕಾರ್ಯಾಚರಣೆಯನ್ನು ಬಿಗಿಗೊಳಿಸಿದೆ.