ವಾಹನದಲ್ಲಿಟ್ಟಿದ್ದ 4.25 ಲಕ್ಷ ರೂ. ನಗದು ಕಳವು – ದೂರು ದಾಖಲು

ಕಾಪು : ಕುಂದಾಪುರದ ವ್ಯಕ್ತಿಯೊಬ್ಬರಿಗೆ ಸೇರಿದ ಮೀನು ಸಾಗಾಟದ ವಾಹನದಲ್ಲಿದ್ದ ನಗದನ್ನು ವಾಹನದಲ್ಲಿದ್ದವರೇ ಕಳವು ಮಾಡಿರುವ ಘಟನೆ ಕಟಪಾಡಿಯಲ್ಲಿ ನಡೆದಿದೆ.

ಇನ್ಸುಲೇಟರ್‌ ಮೀನು ವಾಹನದಲ್ಲಿ ಅಬ್ದುಲ್‌ ಸತ್ತಾರ್‌ ಚಾಲಕನಾಗಿದ್ದು, ಮಹಮ್ಮದ್‌ ಅದ್ನಾನ್‌ ಮತ್ತು ನಿಶಾದ್‌ ಜತೆಗಿದ್ದರು. ಚಾಲಕ ಕಟಪಾಡಿಯಲ್ಲಿ ವಾಹನ ನಿಲ್ಲಿಸಿ ನಿದ್ದೆಗೆ ಜಾರಿದ್ದರು. ಬೆಳಗ್ಗೆ ಎಚ್ಚರವಾದಾಗ ವಾಹನದಲ್ಲಿದ್ದ ಕಂಡಕ್ಟರ್‌ ಮಹಮ್ಮದ್‌ ಅದ್ನಾನ್‌ ಮತ್ತು ನಿಶಾದ್‌ ಇಲ್ಲದೇ ಇದ್ದು, ವಾಹನದಲ್ಲಿಟ್ಟಿದ್ದ 4.25 ಲಕ್ಷ ರೂಪಾಯಿ ನಗದು ಕಳವಾಗಿರುವುದು ಗೊತ್ತಾಗಿದೆ.

ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !