ಹೋಂ ನರ್ಸ್‌ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯಿಂದ ನಗದು ಕಳ್ಳತನ : ದೂರು ದಾಖಲು

ಕಾರ್ಕಳ : ಮನೆಯಲ್ಲಿ ಹೋಂ ನರ್ಸ್‌ ಆಗಿ ಕೆಲಸ ಮಾಡಿಕೊಂಡಿದ್ದವರೇ ಹಣ ಕಳವುಗೈದ ಘಟನೆ ಅ. 27ರಂದು ಕಾರ್ಕಳದಲ್ಲಿ ಸಂಭವಿಸಿದೆ.

ಅನಂತ ಆನಂದ ಶೆಣೈ ಎಂಬವರ ಮನೆಯಲ್ಲಿ ಸುರತ್ಕಲ್‌ ಊರ್ಜಿ ಹೋಂ ಕೇರ್‌ ಎಜೆನ್ಸಿ ಕಡೆಯವರಿಂದ ಹೋಂ ನರ್ಸ್‌ ಆಗಿ ಕೆಲಸ ಮಾಡಿಕೊಂಡಿದ್ದ ಚರಣ್‌ ದೀಕ್ಷಿತ್‌ ಎಸ್‌. ಆರ್‌. ಎಂಬವರು ಅ. 27 ರಂದು ಸಂಜೆ 6 ಗಂಟೆಗೆ ಮನೆಯವರು ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ ಸಂದರ್ಭ ಹಿಟಾಚಿಯವರಿಗೆ ಕೊಡಲು ಅನಂತ ಆನಂದ ಅವರು ತನ್ನ ತಾಯಿಯ ಮೆಡಿಸಿನ್‌ ಬಾಕ್ಸ್‌ನಲ್ಲಿ ಇಟ್ಟಿದ್ದ 60,000 ರೂ. ಹಣವನ್ನು ಕಳವು ಮಾಡಿದ್ದಾರೆ.

ಈ ಬಗ್ಗೆ ಅನಂತ ಆನಂದ ಅವರ ಅಳಿಯ ಶ್ರೀಧರ ಅವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಮಹಿಳೆಗೆ ಕಟ್ಟಿ ಥಳಿಸಿದ ಪ್ರಕರಣ; ಮತ್ತಿಬ್ಬರು ಆರೋಪಿಗಳಿಗೂ ಹೈಕೋರ್ಟ್ ಜಾಮೀನು

ನವೀಕರಿಸಿದ ಡಯಾಲಿಸಿಸ್ ಘಟಕದ ಉದ್ಘಾಟನೆ

ವಿಶ್ವದ ವೇಗದ ಭಗವದ್ಗೀತಾ ಲೇಖಕ : ಕೇವಲ 5.30 ಗಂಟೆಗಳಲ್ಲಿ 18 ಅಧ್ಯಾಯ ಮತ್ತು 700 ಶ್ಲೋಕಗಳ ಬರಹ ಪೂರ್ಣಗೊಳಿಸಿದ ಅದ್ಭುತ ಸಾಧನೆ!