ತೊಕ್ಕೊಟ್ಟು ಕೀರ್ತಿ ಹೊಟೇಲ್ ಎದುರು ನಡೆದ ಸ್ಕೂಟರ್ ಕಳ್ಳತನ : ಆರೋಪಿಗಳು ಅಂದರ್

ಉಳ್ಳಾಲ : ಬೈಕ್ ಕಳವು ನಡೆಸಿದ ಆರೋಪಿಗಳಿಬ್ಬರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದು, ಬಂಧಿತರಿಂದ ತೊಕ್ಕೊಟ್ಟುವಿನಿಂದ ಕಳವು ನಡೆಸಿದ ಆಕ್ಟಿವಾ ಸ್ಕೂಟರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಬಂಧಿತ ಆರೋಪಿಗಳನ್ನು ಮುಕ್ಕಚ್ಚೇರಿ ಕಡಪ್ಪುರ ನಿವಾಸಿ ಅಬ್ದುಲ್ ಸವಾದ್ (26) ಮತ್ತು ಉಳ್ಳಾಲ ಧರ್ಮನಗರ ನಿವಾಸಿ, ಸ್ಟೇಟ್ ಬ್ಯಾಂಕ್ ಬಸ್ಸಿನಲ್ಲಿ ನಿರ್ವಾಹಕನಾಗಿ ಕೆಲಸ ಮಾಡುತ್ತಿರುವ ಯಶ್ಬಿತ್ (22) ಎಂದು ಗುರುತಿಸಲಾಗಿದೆ.

ಬಂಧಿತರಿಬ್ಬರು ಕೆಲ ದಿನಗಳ ಹಿಂದೆ ತೊಕ್ಕೊಟ್ಟು ಕೀರ್ತಿ ಹೊಟೇಲ್ ಎದುರುಗಡೆ ನಿಲ್ಲಿಸಿದ್ದ ಆಕ್ಟಿವಾ ಸ್ಕೂಟರನ್ನು ಕಳವು ನಡೆಸಿದ್ದರು. ಖಚಿತ ಮಾಹಿತಿ ಮೇರೆಗೆ ಆರೋಪಿಗಳಿಬ್ಬರನ್ನು ವಶಕ್ಕೆ ಪಡೆಯುವಲ್ಲಿ ಉಳ್ಳಾಲ ಪೊಲೀಸರು ಯಶಸ್ವಿಯಾಗಿದ್ದಾರೆ.

ಅಬ್ದುಲ್ ಸವಾದ್ ಗಾಂಜಾ ಹಾಗೂ ಕಳವು ಪ್ರಕರಣದ ಆರೋಪಿಯಾಗಿದ್ದು ಮಂಗಳೂರಿನ ವಿವಿಧ ಠಾಣೆಗಳಲ್ಲಿ ಈತನ ವಿರುದ್ದ ಪ್ರಕರಣಗಳಿವೆ.

ಠಾಣಾಧಿಕಾರಿ ಬಾಲಕೃಷ್ಣ ಹೆಚ್.ಎನ್ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿದ್ದು, ರೂ. 80,000 ಬೆಲೆ ಬಾಳುವ ಆಕ್ಟಿವಾ ಸ್ಕೂಟರನ್ನು ವಶಕ್ಕೆ ಪಡೆಯಲಾಗಿದೆ.

Related posts

ಮಂಗಳೂರು ವಿವಿಯಿಂದ ಯಕ್ಷ ಮಂಗಳ ಪ್ರಶಸ್ತಿ ಪ್ರದಾನ

National Fame Award of India Books of Award – Sushanth Brahmavar

ಯಕ್ಷಗಾನ ಹಾಸ್ಯಗಾರ ಮುಖ್ಯಪ್ರಾಣ ಕಿನ್ನಿಗೋಳಿ ನಿಧನಕ್ಕೆ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಸಂತಾಪ