ಹೆಮ್ಮಾಡಿ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಕಳ್ಳತನ; 40 ಸಾವಿರಕ್ಕೂ ಅಧಿಕ ನಗದು ಕಳವು

ಉಡುಪಿ : ಹೆಮ್ಮಾಡಿ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಕಳ್ಳತನದ ಘಟನೆ ನಡೆದಿದೆ. ಈ ದೇಗುಲವು ಇತ್ತೀಚಿಗೆ 7 ಕೋಟಿ ವೆಚ್ಚದಲ್ಲಿ ಜೀರ್ಣೋದ್ದಾರಗೊಂಡಿತ್ತು.

ಕಳ್ಳನು ಬಾಗಿಲ ಚಿಲಕದ ಸ್ಕ್ರೂಗಳನ್ನು ತೆಗೆದು, ಸುತ್ತು ಪೌಳಿ ಮೂಲಕ ದೇವಸ್ಥಾನದ ಒಳಕ್ಕೆ ಪ್ರವೇಶಿಸಿದ್ದಾನೆ. ಚಪ್ಪಲಿ ಹಾಕಿಕೊಂಡಿದ್ದ ಕಳ್ಳನು ಮೊದಲು ಕೈ ಮುಗಿದ ಬಳಿಕ ಕೃತ್ಯವನ್ನು ನಡೆಸಿದ್ದಾನೆ.

ತಿಂಗಳ ಸತ್ಯನಾರಾಯಣ ಪೂಜೆಗೆ ಸಂಗ್ರಹಿಸಿದ ಹಣವನ್ನು ಕಳ್ಳನು ಕಳವುಮಾಡಿದ್ದಾನೆ. ಕಾಣಿಕೆ ಡಬ್ಬಿಯನ್ನು ಒಡೆದು, ಅದರಲ್ಲಿ ಸಂಗ್ರಹಿಸಿದ ಅಂದಾಜು 40 ಸಾವಿರಕ್ಕೂ ಅಧಿಕ ಹಣವನ್ನು ಎಗರಿಸಿದ ಕಳ್ಳನ ಚಲನವಲನ ಸಿಸಿಟಿವಿಯಲ್ಲಿ ಸೆರೆಗೊಂಡಿದೆ.

ಪೊಲೀಸರಿಂದ ತನಿಖೆ ಮುಂದುವರೆದಿದೆ.

Related posts

ಕರ್ನಾಟಕ ಲಲಿತ ಕಲಾ ಅಕಾಡೆಮಿಗೆ ಸಹ ಸದಸ್ಯರಾಗಿ ಆಸ್ಟ್ರೋ ಮೋಹನ್ ನೇಮಕ

ಕೆಎಂಸಿ ಉದ್ಯೋಗಿಯ ಮಾಂಗಲ್ಯ ಸರ ಎಗರಿಸಿದ ಆರೋಪಿ ಅರೆಸ್ಟ್

ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಏಷ್ಯಾದ ಮೊದಲ ಮಾಮಾ ಅನ್ನಿ ಹೈ-ಫಿಡೆಲಿಟಿ ಬರ್ತಿಂಗ್ ಸಿಮ್ಯುಲೇಟರ್ ಪರಿಚಯ