ಯುವಕನ ಹಲ್ಲೆಗೈದು ಸುಲಿಗೆ

ಮಣಿಪಾಲ : ಶುಭ ಸಮಾರಂಭಗಳಿಗೆ ಹಾಡುಗಳ ರೆಕಾರ್ಡ್‌ ಮಾಡುವ ವೃತ್ತಿ ಮಾಡಿಕೊಂಡಿದ್ದ ಮಂಗಳೂರಿನ ತೋಕೂರು ನಿವಾಸಿ ಅಬ್ದುಲ್‌ ರಾಝೀಕ್‌ (21) ಅವರಿಗೆ ಮಣಿಪಾಲದಲ್ಲಿ ಹಲ್ಲೆ ನಡೆಸಿದ ಘಟನೆ ಆ. 22ರಂದು ರಾತ್ರಿ ಸಂಭವಿಸಿದೆ.

ವಾಜಿದ್‌ ಎಂಬಾತ ಅಕ್ಕನ ಮಗಳ ಹುಟ್ಟುಹಬ್ಬಕ್ಕೆ ಹಾಡು ರೆಕಾರ್ಡ್‌ ಮಾಡಿಕೊಡಬೇಕೆಂದು ರಾಝೀಕ್‌ಗೆ ತಿಳಿಸಿದ್ದು, ಹಾಡು ರೆಕಾರ್ಡ್‌ ಮಾಡಿ ನೀಡಿದ ಬಳಿಕ ಹಣವನ್ನು ನೀಡದೆ ಸತಾಯಿಸಿದ್ದರು.

ಕೊನೆಗೆ ಮಣಿಪಾಲಕ್ಕೆ ಬಂದರೆ ಹಣ ಕೊಡುತ್ತೇನೆ ಎಂದು ಹೇಳಿ ಕರೆಸಿದ ವಾಜಿದ್‌ ಮತ್ತು ಆತನ ಸ್ನೇಹಿತರು ರಾಝೀಕ್‌ಗೆ ಹಲ್ಲೆ ಮಾಡಿ ಕುತ್ತಿಗೆಯಲ್ಲಿದ್ದ ಸುಮಾರು 2 ಸಾವಿರ ರೂ ಮೌಲ್ಯದ ಬೆಳ್ಳಿ ಚೈನು, 30 ಸಾವಿರ ರೂ. ನಗದು, 70 ಸಾವಿರ ರೂ. ಮೌಲ್ಯದ ಐಫೋನ್‌ ಸುಲಿಗೆ ಮಾಡಿದ್ದಾರೆ.

ಗಾಯಗೊಂಡ ರಾಝೀಕ್‌ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಉಡುಪಿ ಜಿಲ್ಲೆಯಲ್ಲಿ ಮಂಗನಕಾಯಿಲೆ ಪ್ರಕರಣ ಬಾರದಂತೆ ಮುನ್ನೆಚ್ಚರಿಕೆ ವಹಿಸಿ : ಆರೋಗ್ಯ ಇಲಾಖೆಗೆ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ

ನಿಷೇಧಾಜ್ಞೆ, ಸಂತೆ, ಜಾತ್ರೆ ನಿಷೇಧ ಆದೇಶ ಹಿಂದೆಗೆತ : ಉಡುಪಿ ಜಿಲ್ಲಾಧಿಕಾರಿ

ಶಾಲಾ ವಾಹನಕ್ಕೆ ಬೈಕ್ ಢಿಕ್ಕಿಯಾಗಿ ಸವಾರ ಮೃತ್ಯು