ಸಮುದ್ರ ಪಾಲಾದ ಯುವಕ; ಮುಂದುವರಿದ ಶೋಧಕಾರ್ಯ

ಕುಂದಾಪುರ : ತಾಲೂಕಿನ ಬೀಜಾಡಿಯಲ್ಲಿ ಕಡಲ ಅಲೆಗಳ ರಭಸಕ್ಕೆ ಸಿಕ್ಕು ತುಮಕೂರು ತಿಪಟೂರು ಮೂಲದ ಟಿ.ಆ‌ರ್ ಯೋಗೀಶ್ (23) ಎನ್ನುವ ಯುವಕ ಕೊಚ್ಚಿಹೋದ ಘಟನೆ ಬುಧವಾರ ಸಂಜೆ ವೇಳೆ ನಡೆದಿದ್ದು ಆತನ ಸುಳಿವು ಗುರುವಾರ ಸಂಜೆವರೆಗೂ ಪತ್ತೆಯಾಗಿಲ್ಲ.

ಕುಂದಾಪುರದ ಗೋಪಾಡಿ-ಬೀಜಾಡಿಯ ಸ್ನೇಹಿತನ ಮನೆಯ ವಿವಾಹ ಕಾರ್ಯಕ್ರಮಕ್ಕೆ ಬಂದಿದ್ದ ಯುವಕರಿಬ್ಬರು ಸಮುದ್ರ ವಿಹಾರಕ್ಕೆ ತೆರಳಿದ್ದ ವೇಳೆ ದುರ್ಘಟನೆ ಸಂಭವಿಸಿತ್ತು. ಈತನೊಂದಿಗಿದ್ದ ಇನ್ನೋರ್ವ ಸಂದೀಪ್ ಎನ್ನುವ ಯುವಕ‌ನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಗುರುವಾರ ಬೆಳಿಗ್ಗಿನಿಂದಲೂ ಮೀನುಗಾರರು, ಪೊಲೀಸರು, ಕರಾವಳಿ ಕಾವಲು ಪಡೆಯವರು, ಸ್ಥಳೀಯರು ಸತತ ಹುಡುಕಾಟ ನಡಸಿದರೂ ಕೂಡ ಕಡಲು ಪ್ರಕ್ಷುಬ್ಧಗೊಂಡಿದ್ದು ಅಲೆಗಳು ಹೆಚ್ಚಿದ್ದ ಕಾರಣ ಯುವಕನ ಸುಳಿವು ಪತ್ತೆಯಾಗಿಲ್ಲ.

Related posts

40 ಮರಾಠ ವಟುಗಳಿಗೆ ಸಾಮೂಹಿಕ ಬ್ರಹ್ಮೋಪದೇಶ

ವ್ಯಾಸರಾಜ ಶ್ರೀಗಳಿಂದ ಸಂಸ್ಥಾನ ಪೂಜೆ

ಮೀನು ವ್ಯಾಪಾರಿಗೆ 90 ಲಕ್ಷ ರೂ.ವಂಚನೆ – ದೂರು ದಾಖಲು