ಅನೂಪ್ ಮತ್ತು ಮಂಜುಶ್ರೀ ಇತ್ತೀಚೆಗೆ ಹಾಡಿದ್ದ ಹಾಡಿನ ವೀಡಿಯೋ ಇದೀಗ ವೈರಲ್

ಲ್ಯಾನ್ಸ್ ಹವಾಲ್ದಾರ್ ಅನೂಪ್ ಪೂಜಾರಿ ಸಾವು ಜನರನ್ನು ನೋವಿನ ಕಡಲಿಗೆ ತಳ್ಳುವಂತೆ ಮಾಡಿದೆ.

33‌ರ ಹರೆಯ, ಕುಟುಂಬದ ಆಕ್ರಂದನ ಪುಟ್ಟ ಮಗುವಿನ ಅಳು, ಊರ ಜನರ ಪ್ರೀತಿ ಕೋಟ್ಯಾಂತರ ಜನರನ್ನು ವಿಚಲಿತಗೊಳಿಸಿದೆ. ಅನೂಪ್ ಪೂಜಾರಿ ಮತ್ತು ಮಂಜುಶ್ರೀಯದ್ದು ಪ್ರೇಮ ವಿವಾಹ. ಸಂಗೀತಾಸಕ್ತರಾದ ಇಬ್ಬರಿಗೆ ಫೇಸ್‌ಬುಕ್‌ನಲ್ಲಿ ಪರಿಚಯವಾಗಿತ್ತು. ಸಂಗೀತ ಮತ್ತು ಪ್ರೀತಿಗೆ ಜಾತಿ ಅಡ್ಡಿಯಾಗಲಿಲ್ಲ. ಎರಡು ಮನೆಯವರನ್ನು ಒಪ್ಪಿಸಿ 2022‌ರಲ್ಲಿ ಮದುವೆಯಾಗಿದ್ದರು.

ಅನೂಪ್ ಮತ್ತು ಮಂಜುಶ್ರೀ ಆಪ್ತರ, ಸಂಬಂಧಿಕರ ಕಾರ್ಯಕ್ರಮ‌ಗಳಲ್ಲಿ ಹಾಡುತ್ತಿದ್ದರು. ಇತ್ತೀಚೆಗೆ ಹಾಡಿದ್ದ ಹಾಡಿನ ವೀಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ. ಅಪರಂಜಿ ಚಿನ್ನವೋ ಚಿನ್ನವೋ ನನ್ನ ಮನೆಯ ದೇವತೆ ಹಾಡನ್ನು ಜನ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ನೋವು ವ್ಯಕ್ತಪಡಿಸುತ್ತಿದ್ದಾರೆ.

Related posts

60 ಲಕ್ಷ ವೆಚ್ಚದಲ್ಲಿ ಹೆರ್ಗ ಮಾರುತಿ ನಗರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಯಶ್‌ಪಾಲ್ ಸುವರ್ಣ ಚಾಲನೆ

ಎ.6 ಬಿಜೆಪಿ ಸ್ಥಾಪನಾ ದಿನಾಚರಣೆ, ಎ.10 ಉಡುಪಿಯಲ್ಲಿ ಜನಾಕ್ರೋಶ ಯಾತ್ರೆ

ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರೊಂದಿಗೆ ರಂಗಾಸಕ್ತರ ಸಂವಾದ