ಧಗಧಗನೇ ಹೊತ್ತಿ ಉರಿದ ಟಿಟಿ ವಾಹನ‌

ಬೆಳ್ತಂಗಡಿ : ನಿಲ್ಲಿಸಿದ್ದ ಟಿಟಿ ವಾಹನವೊಂದು ಆಕಸ್ಮಿಕವಾಗಿ ಧಗಧಗನೇ ಹೊತ್ತಿ ಉರಿದ ಘಟನೆ ಬೆಳ್ತಂಗಡಿ ತಾಲೂಕಿನ ಉಜಿರೆಯ ಟಿ.ಬಿ.ಕ್ರಾಸ್‌ನಲ್ಲಿ ನಡೆದಿದೆ.

ಜೂ.26ರಂದು ರಾತ್ರಿ ಸುಮಾರು 12 ಗಂಟೆಗೆ ಈ ಘಟನೆ ಸಂಭವಿಸಿದೆ. ಖಾಸಗಿ ಸೂಪರ್ ಮಾರ್ಕೆಟ್‌ವೊಂದಕ್ಕೆ ಸೇರಿದ್ದ ಈ ಟಿಟಿ ವಾಹನವನ್ನು ಚಾಲಕ ರಸ್ತೆ ಬದಿ ನಿಲ್ಲಿಸಿ ಹೋಗಿದ್ದರು. ಈ ವೇಳೆ ನೋಡನೋಡುತ್ತಿದ್ದಂತೆ ಶಾರ್ಟ್ ಸರ್ಕ್ಯೂಟ್‌ನಿಂದ ಟಿಟಿ ವಾಹನ ಧಗಧಗನೇ ಹೊತ್ತಿ ಉರಿದಿದೆ. ಟಿಟಿ ಅಗ್ನಿಗೆ ಆಹುತಿಯಾಗುತ್ತಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.

Related posts

ವಿಶ್ವದ ವೇಗದ ಭಗವದ್ಗೀತಾ ಲೇಖಕ : ಕೇವಲ 5.30 ಗಂಟೆಗಳಲ್ಲಿ 18 ಅಧ್ಯಾಯ ಮತ್ತು 700 ಶ್ಲೋಕಗಳ ಬರಹ ಪೂರ್ಣಗೊಳಿಸಿದ ಅದ್ಭುತ ಸಾಧನೆ!

Worlds Fastest Bhagvad Gita Writer Completing 18 Chapters & 700 Verses in Just 5.30 Hours

ಮೀನುಗಾರರ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಭಾಷಣ-ಹಿಂದೂ ಯುವಸೇನೆ ಮುಖಂಡನ ವಿರುದ್ಧ ಸುಮೊಟೋ ಕೇಸ್