‘ದ ಟೈಗರ್ ಕೆಫೆ’ ಚಿತ್ರದ ಪೋಸ್ಟರ್ ಅನಾವರಣ – ಚಿತ್ರಕ್ಕೆ ಶುಭ ಹಾರೈಸಿದ ನಾಡೋಜ ಡಾ. ಜಿ. ಶಂಕರ್

ಪಡುಬಿದ್ರಿ : ಸಕಲೇಶಪುರದ ಗುಡ್ಡ ಕಾಡುಗಳಲ್ಲಿ ಚಿತ್ರೀಕರಣಗೊಂಡ ದೀಪ್ನಾ ಕರ್ಕೇರ ನಿರ್ದೇಶನದ ‘ದ ಟೈಗರ್ ಕೆಫೆ’ ಚಿತ್ರದ ಪೋಸ್ಟರನ್ನು ಮೊಗವೀರ ಮುಂದಾಳು ನಾಡೋಜ ಡಾ.ಜಿ. ಶಂಕರ್ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಸಭಾಂಗಣದಲ್ಲಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣರವರನ್ನು ಒಡಗೂಡಿ ಅನಾವರಣಗೊಳಿಸಿ ಶುಭ ಹಾರೈಸಿದ್ದಾರೆ.

ಈ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶನ, ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದ ದೀಪ್ನಾ ಕರ್ಕೇರ, ಪ್ರಮುಖವಾಗಿ ಕಾಡು ಪ್ರಾಣಿಗಳನ್ನು ಉಳಿಸಿ ಬೆಳೆಸುವ ಸಾರವನ್ನು ಪಸರಿಸುವ ಆಧಾರದ ಮೇಲೆ ಈ ಚಿತ್ರವನ್ನು ನಿರ್ಮಿಸಲಾಗಿದ್ದು, ಒಂದೇ ದಿನದಲ್ಲಿ ಚಿತ್ರೀಕರಣ ಮುಗಿಸುವ ಹಿನ್ನಲೆಯಲ್ಲಿ ನಮ್ಮ ಚಿತ್ರತಂಡ ಮುಂದಡಿ ಇಟ್ಟಿದ್ದೆವೆಯಾದರೂ, ಕೆಲವೊಂದು ತಾಂತ್ರಿಕ ಕಾರಣಗಳಿಂದ ಎರಡು ದಿನಗಳಲ್ಲಿ ಚಿತ್ರೀಕರಣ ಮುಗಿಸುವ ಮೂಲಕ ದಾಖಲೆಯೊಂದನ್ನು ಮಾಡಿದೆ. ಈ ಚಿತ್ರದಲ್ಲಿ ಖಳ ನಾಯಕನ ಪಾತ್ರವೇ ಪ್ರಮುಖವಾಗಿದೆ. ಇದರಲ್ಲಿ ಮೂರು ಹಾಡುಗಳಿದ್ದು, ಫೈಟಿಂಗ್ ಕೂಡಾ ಅಡಕವಾಗಿದೆ. ಸಕಲೇಶಪುರದ ಸುಂದರ ಗುಡ್ಡಕಾಡು ಪ್ರದೇಶದಲ್ಲಿ ಚಿತ್ರೀಕರಣಗೊಂಡ ಈ ಚಿತ್ರ ಕೆಲವೇ ತಿಂಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದರು.

ಚಿತ್ರಕ್ಕೆ ಸಾಹಸ ಬಂಡೆ ಚಂದ್ರ ಬೆಂಗಳೂರು, ಛಾಯಾಗ್ರಹಣ ಅಲನ್ ಭರತ್ ಬೆಂಗಳೂರು, ಸ್ಥಿರ ಚಿತ್ರ, ಸುರೇಶ್ ಎರ್ಮಾಳ್ ರೋಶ್ನಿ ಸ್ಟುಡಿಯೋ ಪಡುಬಿದ್ರಿ. ತಾರಾಗಣದಲ್ಲಿ ನಿಶಾನ್, ದುರ್ಗಾ ಪ್ರಸಾದ್, ಶಾಂಭವಿ ಆಚಾರ್ಯ, ಸಾಯಿನಾಥ್ ಎಂ. ಶೆಟ್ಟಿ, ನಿಹಾಲ್ ವಿ. ಕುಂದರ್, ವಿನೋದ್ ನೀರ್‌ಮಾ‌ರ್ಗ, ಸುರೇಶ್ ಎರ್ಮಾಳ್, ವಿಕಾಶ್ ಶೆಟ್ಟಿ, ಕಾರ್ತಿಕ್ ಎಸ್.ಸಾಲ್ಯಾನ್, ಹರೀಶ್ ಜೋಗಿ, ಚಂದ್ರಶೇಖರ ಕುಲಾಲ್, ವೈಶಾಲಿ ಎರ್ಮಾಳ್ ಮುಂತಾದವರಿದ್ದಾರೆ.

Related posts

ಸಿಬ್ಬಂದಿಗಳಿಗೆ ಝೂನೋಟಿಕ್ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕುರಿತ ತರಬೇತಿ ಸಾಧನಗಳನ್ನು ಪ್ರಾರಂಭಿಸಿದ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್

ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ ದ್ವಿತೀಯ

ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣ – ತಮ್ಮ ವಕಾಲತ್ತನ್ನು ವಾಪಾಸು ಪಡೆದ ಆರೋಪಿ ಪ್ರವೀಣ್ ಚೌಗುಲೆ ಪರ ವಕೀಲರು