ಮೊಬೈಲ್ ಟವರ್ ಬ್ಯಾಟರಿ ಕದಿಯುತ್ತಿದ್ದ ಕಳ್ಳ ಅರೆಸ್ಟ್

ಮಂಗಳೂರು : ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್ ಟವರ್‌ಗಳ ಬ್ಯಾಟರಿಗಳನ್ನು ಮತ್ತು ಕಂಪೌಂಡ್ ಗೇಟ್‌ಗಳನ್ನು ಕಳ್ಳತನ ಮಾಡಿದ ಆರೋಪಿಯನ್ನು ಮುಲ್ಕಿ ಪೊಲೀಸರು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ಕೇರಳ ಇಟ್ಟಿ ಪನಿಕರ್(58) ಎಂದು ಗುರುತಿಸಲಾಗಿದೆ. ಆರೋಪಿ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಏರ್‌ಟೆಲ್ ಕಂಪೆನಿಯ ಮೊಬೈಲ್ ಟವರ್‌ಗಳಲ್ಲಿರುವ ಬ್ಯಾಟರಿಗಳನ್ನು ಕಳ್ಳತನ ಮಾಡಿದ್ದ ಅಲ್ಲದೆ ಐಕಳ ಗ್ರಾಮದ ನೆಲ್ಲಿಗುಡ್ಡೆ ಕ್ರಾಸ್ ಎಂಬಲ್ಲಿ ಜಾಗಕ್ಕೆ ಅಳವಡಿಸಿರುವ 5 ಕಬ್ಬಿಣದ ಗೇಟ್‌ಗಳನ್ನು ಕದ್ದೊಯ್ದಿದ್ದ.

ಈ ಕುರಿತಂತೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ 3 ಪ್ರತ್ಯೇಕ ಪ್ರಕರಣಗಳು ದಾಖಲಾಗಿರುತ್ತದೆ. ಈ ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಯಿಂದ 39 ಬ್ಯಾಟರಿಗಳನ್ನು ಮತ್ತು ಕಬ್ಬಿಣದ ಕಂಪೌಂಡ್ ಗೇಟ್‌ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. 1. ಮೊಬೈಲ್ ಟವರ್‌ಗೆ ಸಂಬಂಧಿಸಿದ ಬ್ಯಾಟರಿಗಳು ಒಟ್ಟು-39 ಇದರ ಅಂದಾಜು ಮೌಲ್ಯ 2,56,000 ರೂಪಾಯಿ 2. ಕಬ್ಬಿಣದ ಗೇಟ್ ಗಳು-3, ಇದರ ಅಂದಾಜು ಮೌಲ್ಯ 52 ಸಾವಿರ ಹಾಗೂ ಕಳ್ಳತನಕ್ಕೆ ಉಪಯೋಗಿಸಿದ ಪಿಕ್ಅಪ್ ಗೂಡ್ಸ್ ಟೆಂಪೋವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Related posts

ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣ – ತಮ್ಮ ವಕಾಲತ್ತನ್ನು ವಾಪಾಸು ಪಡೆದ ಆರೋಪಿ ಪ್ರವೀಣ್ ಚೌಗುಲೆ ಪರ ವಕೀಲರು

ಪ್ರೊಡಕ್ಷನ್ ನಂಬರ್ 1 ತುಳು ಸಿನಿಮಾದ ಭಾಗ 1ರ ಮುಹೂರ್ತ ಸಮಾರಂಭ