ರಾಜ್ಯ ಸರಕಾರವನ್ನು ಜಿಹಾದಿ, ಮತೀಯವಾದಿಗಳು ನಡೆಸುತ್ತಿದ್ದಾರೆ : ಹರಿಪ್ರಕಾಶ್ ಕೋಣೆಮನೆ

ಉಡುಪಿ : ರಾಜ್ಯ ಸರಕಾರವನ್ನು ಜಿಹಾದಿ, ಮತೀಯವಾದಿಗಳು ನಡೆಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಬರೇ ಮುಖವಾಡ ಮಾತ್ರ ಎಂದು ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ್ ಕೋಣೆಮನೆ ವಾಗ್ಧಾಳಿ ನಡೆಸಿದ್ದಾರೆ.

ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ಗಣೇಶೋತ್ಸವ ಮೆರವಣಿಗೆಯ ವೇಳೆ ಕಲ್ಲುತೂರಾಟ, ಪೆಟ್ರೋಲ್ ಬಾಂಬ್ ಎಸೆದು ಹಿಂದೂಗಳ ಅಂಗಡಿಗಳನ್ನು ಭಸ್ಮ ಮಾಡಲಾಗಿದೆ. ಗೃಹ ಸಚಿವರು ಈ ಘಟನೆಯನ್ನು ಅಕಸ್ಮಿಕ ಎಂದು ಹೇಳಿದ್ದಾರೆ. ಇದು ಅತ್ಯಂತ ಹೇಡಿತನ ಹಾಗೂ ನಾಚಿಕೆಗೇಡಿನ ಹೇಳಿಕೆ. ಮೆರವಣಿಗೆಯ ವೇಲೆ ಒಬ್ಬನೇ ಒಬ್ಬ ಪೊಲೀಸ್ ಪೇದೆ ಇರಲಿಲ್ಲ. ಕಳೆದ ವರ್ಷ ಇದೇ ಪ್ರದೇಶದಲ್ಲಿ ಘಟನೆ ನಡೆದರೂ ಸಹ ಬಂದೋಬಸ್ತ್ ಮಾಡಿರಲಿಲ್ಲ, ಯಾವ ಸ್ಥಳದಿಂದ ಮೆರವಣಿಗೆ ಹೋಗಬೇಕೆಂದು ಪೊಲೀಸರ ಬದಲಾಗಿ ಜಿಹಾದಿಗಳು ನಿರ್ಧರಿಸುವ ಮಟ್ಟಿಗೆ ಈ ಸರಕಾರ ಅಧೋಗತಿಗೆ ತಲುಪಿದೆ. ಸಿಎಂ ಸಿದ್ದರಾಮಯ್ಯ, ಡಿಕೆಶಿ ಮುಖವಾಡ ಮಾತ್ರ, ಸರಕಾರವನ್ನು ಜಿಹಾದಿಗಳು ಹಾಗೂ ಮತೀಯವಾದಿಗಳು ನಡೆಸುತ್ತಿದ್ದಾರೆ. ಅಂಗಡಿ ಕಳೆದುಕೊಂಡ ಸಂತ್ರಸ್ತರಿಗೆ ಸೂಕ್ತ ಪರಿಹಾರ ಹಾಗೂ ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.

ಇನ್ನು ವಿದೇಶದಲ್ಲಿ ರಾಹುಲ್ ಗಾಂಧಿ ಭಾರತದಲ್ಲಿ ಮೀಸಲಾತಿ ರದ್ದು ಮಾಡುತ್ತೇವೆ ಎಂದು ಹೇಳಿದ್ದಾರೆ. ನೆಹರೂ-ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್‌ನ ಮಾನಸಿಕತೆ ಇವತ್ತು ಎಲ್ಲರ ಮುಂದೆ ಬೆತ್ತಲಾಗಿದೆ. ಮೀಸಲಾತಿ ರದ್ದು ಮಾಡುವ ಬಗ್ಗೆ ಕಾಂಗ್ರೆಸ್ ಚಿಂತನೆ ನಡೆಸಿದೆ. ಅದ್ದರಿಂದ ಈ ಹೇಳಿಕೆಯನ್ನು ಖಂಡಿಸಿ ಬಿಜೆಪಿ ರಾಜ್ಯದ ಮೂಲೆ ಮೂಲೆಗಳಲ್ಲಿ ಪ್ರತಿಭಟನೆ, ಜನಾಂದೋಲನ ರೂಪಿಸಲಿದೆ ಎಂದರು.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !