ಹೆರಿಗೆ ಶುಶ್ರೂಷಕಿ ಶ್ರೀಮತಿ ಲಕ್ಷ್ಮೀ ಮರಕಾಲ್ತಿ ಇನ್ನಿಲ್ಲ

ಉಡುಪಿ : ಬ್ರಹ್ಮಾವರದ ವಡ್ಡರ್ಸೆ ಪಂಚಾಯತ್‌ನ ಕಾವಡಿ ಗ್ರಾಮದ ನಿವಾಸಿ ದಿವಂಗತ ಅಣ್ಣಯ್ಯ ಅವರ ಧರ್ಮಪತ್ನಿ, ಗ್ರಾಮಾಂತರ ಭಾಗದ ಹೆರಿಗೆ ಸ್ಪೆಷಲಿಸ್ಟ್ ಎಂದೇ ಖ್ಯಾತರಾದ ಲಕ್ಷ್ಮೀ ಮರಕಾಲ್ತಿ (88) ಹೃದಯಾಘಾತದಿಂದ ನಿಧನರಾದರು.

ಹಳ್ಳಿ ಕಡೆ ಮನೆಮನೆಗೆ ತೆರಳಿ ಬಾಣಂತಿಯರಿಗೆ ಹೆರಿಗೆ ಮಾಡಿಸುವ ಕಾಯಕ ನಡೆಸುತ್ತಿದ್ದು ಸುಮಾರು 800 ಕ್ಕೂ ಹೆಚ್ಚು ಹೆರಿಗೆ ಮಾಡಿಸಿ ಖ್ಯಾತಿ ಹೊಂದಿದ್ದರು. ಈ ಕಾಯಕವನ್ನು ಉಚಿತ ಸೇವೆಯಾಗಿ ಮಾಡುತ್ತಿದ್ದರು ಎಂಬುದು ಗಮನಾರ್ಹ.

ಮೃತರು ಎರಡು ಗಂಡು, ಐದು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧುಮಿತ್ರರರನ್ನು ಅಗಲಿದ್ದಾರೆ.

Related posts

ಯುವನಿಧಿಯ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಿ : ರಮೇಶ್ ಕಾಂಚನ್

ದೆಹಲಿಗೆ ಮಹಿಳಾ ಮುಖ್ಯಮಂತ್ರಿ : ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಸಂಭ್ರಮಾಚರಣೆ

ನಿಲ್ಲಿಸಿದ್ದ ಮೀನುಗಾರಿಕಾ ಬೋಟ್‌ನಲ್ಲಿ ಅಗ್ನಿ ಅವಘಡ – 15 ಲಕ್ಷ ರೂ.ನಷ್ಟ